Friday, March 24, 2023

Latest Posts

ಸಿದ್ಧರಾಮಯ್ಯ ಬಾದಾಮಿಗೆ ಬಂದರೂ ಸೋಲಿಸುವ ಶಕ್ತಿ ಬಿಜೆಪಿಯಲ್ಲಿದೆ: ಶಾಂತಗೌಡ ಪಾಟೀಲ್

ಹೊಸದಿಗಂತ ವರದಿ, ಬಾಗಲಕೋಟೆ:

ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎನ್ನುವವರಿಗೆ ಯಾವ ಕ್ಷೇತ್ರವೆಂದು ಅಂತಿಮವಾಗಿಲ್ಲ. ಬಾದಾಮಿಯಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಸಿದ್ಧರಾಮಯ್ಯನವರು ಬಾದಾಮಿಗೆ ಬಂದರೂ ಅವರನ್ನು ಸೋಲಿಸುವ ಶಕ್ತಿ ಬಿಜೆಪಿಯಲ್ಲಿದೆ. ಬಾದಾಮಿ ಮತಕ್ಷೇತ್ರದಲ್ಲಿ ಈ ಭಾರಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ನವನಗರದ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನೂ ಹಿಡಿದು ಬಾದಾಮಿಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲು ನಿರ್ಧರಿಸಲಾಗಿದೆ. ಅಷ್ಟೊಂದ ಪಕ್ಷ ಬಲಿಷ್ಠವಾಗಿದೆ. ಒಟ್ಟಾಗಿ ಹಓಗಿ ಚುನಾವಣೆಯನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದರು.
ಬಾದಾಮಿಗೆ ಯಾರಿಗೆ ಟಿಕೆಟ್ ಕೊಟ್ಟರೂ ಅಸಮಾಧಾನ ಉಂಟಾಗುವುದಿಲ್ಲ. ಈಗಾಗಲೇ ಕ್ಷೇತ್ರದಲ್ಲಿ ಆಕಾಂಕ್ಷಿಗಳೆಲ್ಲ ಸೇರಿಕೊಂಡು ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದು ಟಿಕೆಟ್ ಯಾರಿಗೆ ಸಿಗಲಿ ಬಿಜೆಪಿ ಗೆಲ್ಲಿಸುವುದು ಒಂದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಪಕ್ಷದಲ್ಲಿ ಎಲ್ಲರೂ ಒಂದಾಗಿದ್ದೇವೆ ಎಂಬ ಸಂದೇಶವನ್ನು ಜನರಿಗೆ ನೀಡಿದ್ದೇವೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಮಾತನಾಡಿ, ಬಾದಾಮಿಯಿಂದ ಸಿದ್ಧರಾಮಯ್ಯನವರು ಮರು ಜನ್ಮ ಪಡೆದ ನಂತರ ಅಲ್ಲೋಲ ಕಲ್ಲೋಲ ವಾತಾವರಣ ಸೃಷ್ಟಿ ಮಾಡಿದರು. ಪಾದಯಾತ್ರೆ ಕೂಡ ನಡೆಸಿದರು ಆದರೆ ಈಗ ಹಿಂಬಡ್ತಿ ಪಡೆದು ಕ್ಷೇತ್ರವನ್ನು ಬಿಟ್ಟು ಹೊರಟಿದ್ದಾರೆ. ಇಲ್ಲಿ ಸಿದ್ಧರಾಮಯ್ಯನವರೇ ಆಗಲಿ ಯಾರೇ ಸ್ಪ ಮಾಡಿದರೂ ಬಾದಾಮಿ ನಮ್ಮ ಪಕ್ಷವೇ ಗೆಲ್ಲುವುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!