May 5, 2026
Tuesday, May 5, 2026
spot_img

ಅಪ್ಪ ಮಂತ್ರಿ, ಅಮ್ಮ ಸಂಸದೆಯಾದರೂ ಮಗನಿಗಾಗಿ ಅಂಗಲಾಚಿದರು: ಸಮರ್ಥ ಗೆಲುವಿಗೆ ಶಾಸಕ ಮುನಿರತ್ನ ಟೀಕೆ

ಹೊಸದಿಗಂತ ವರದಿ, ಚಿತ್ರದುರ್ಗ

ಅಪ್ಪ ಮಂತ್ರಿ, ಅಮ್ಮ ಲೋಕಸಭಾ ಸದಸ್ಯರು ಇಷ್ಟಾದರೂ ಸಹಾ ಮಗನನ್ನು ಗೆಲಿಸಲು ಇನ್ನೊಬ್ಬರ ಮಂತ್ರಿಯ ಬಳಿ ಹೋಗಿ ತನ್ನ ಮಗನ ಗೆಲುವಿಗಾಗಿ ಅಂಗಲಾಚಬೇಕಾದ ಪರಿಸ್ಥಿತಿ ದಾವಣಗೆರೆ ದಕ್ಷಿಣದಲ್ಲಿ ಉಂಟಾಗಿತ್ತು ಎಂದು ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಶಾಸಕ ಮುನಿರತ್ನ ಟೀಕಿಸಿದರು.

ಚಿತ್ರದುರ್ಗ ನಗರದಲ್ಲಿ ಮೇ ೯ ರಂದು ನಡೆಯಲಿರುವ ಯಡೆಯೂರಪ್ಪರವರ ಅಭೀಮಾನೋತ್ಸವ ಸಮಾ ರಂಭದ ಪೂರ್ವಬಾವಿ ಸಿದ್ದತೆಯನ್ನು ಪರೀಶೀಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪಂಚ ರಾಜ್ಯ ಚುನಾವಣೆಯಲ್ಲಿ ಪ್ರಮುಖವಾಗಿ ಪಶ್ಚಿಮ ಬಂಗಾಳ ಅದು ಒಂದು ರಾಜ್ಯ ಎನ್ನುವುದಕ್ಕಿಂತ ದೇಶಕ್ಕೆ ಹಿಡಿದಂತಹ ಕೆಟ್ಟ ವ್ಯಕ್ತಿ ಕೆಟ್ಟ ಪರಿಸ್ಥಿತಿಯನ್ನು ನಿರ್ಮಾಣ ಮಾಡಲು ಹೊರಟಿದಂತಹ ತೃಣ ಮೂಲ ಕಾಂಗ್ರೆಸ್ ನ್ನು ಕಿತ್ತಾಕಿರುವುದು ದೇಶಕ್ಕೆ ಒಳ್ಳೇಯದಾಗಿದೆ ಎಂದರು.

ಅದನ್ನು ಹೀಗೆಯೇ ಬಿಟ್ಟಿದ್ದರೆ ೫-೧೦ ವರ್ಷದಲ್ಲಿ ದೇಶದ ಅರ್ಧ ಭಾಗಕ್ಕೆ ಹಬ್ಬುತ್ತಿತ್ತು. ಅದನ್ನು ಕ್ಲೀನ್ ಮಾಡಲಾಗಿದೆ. ದೇಶದ ರಕ್ಷಣೆ ನಮ್ಮ ಕರ್ತವ್ಯ. ದೇಶದ ಗಡಿ ಆಚೆ ಇರುವವರನ್ನು ಏನು ಬೇಕಾದರೂ ಮಾಡಬಹುದು. ಆದರೆ ದೇಶದ ಒಳಗಡೆ ಇರುವವರನ್ನು ಏನು ಮಾಡಲಾಗುವುದಿಲ್ಲ. ದೇಶದ ಒಳಗಿನ ಕೀಟಗಳನ್ನು ಕ್ಲೀನ್ ಮಾಡುವುದು ತುಂಬಾ ಕಷ್ಟ. ಇಂತಹ ಕೆಲಸವನ್ನು ನರೇಂದ್ರ ಮೋದಿ, ಅಮಿತಾ ಶಾ ಸೇರಿದಂತೆ ಎಲ್ಲರೂ ಸೇರಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಉತ್ತಮ ದಿನಗಳು ಬರಲಿವೆ ಎಂದರು.

ಉಪ ಚುನಾವಣೆಯಲ್ಲಿ ಆ ರಾಜ್ಯದಲ್ಲಿ ಯಾವ ಸರ್ಕಾರ ಇರುತ್ತದೆಯೋ ಅವರು ಗೆಲುವು ಸಾಧಿಸುವುದು ಸಾಮಾನ್ಯ. ಏಕೆಂದರೆ ಸರ್ಕಾರ ಮಟ್ಟದಲ್ಲಿ ಏನಾದರೂ ಕೆಲಸಗಳು ಆಗುತ್ತವೆ ಎಂಬುದು. ಒಂದು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲಿಕ್ಕೆ ಮುಖ್ಯಮಂತ್ರಿಗಳು ೧೦ ಬಾರಿ ಹಾಗೂ ಪಕ್ಷದ ಅಧ್ಯಕ್ಷರು ೨೦ ಬಾರಿ ಹೋಗಿದ್ದಾರೆ. ಅಲ್ಲದೇ ಸಚಿವ ಸಂಪುಟದ ಮಂತ್ರಿಗಳು ಕ್ಷೇತ್ರಗಳಲ್ಲಿ ಠಿಕಾಣಿ ಹೂಡಿದ್ದರು, ಇತಿಹಾಸದಲ್ಲಿ ಇಷ್ಟು ಕಷ್ಟಪಟ್ಟು ಗೆದ್ದಿರುವುದು ಯಾವುದಾದರೂ ಇದ್ದರೆ, ಅದು ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರ ಎಂದು ಹೇಳಿದರು.

ಒಂದು ಉಪ ಚುನಾವಣೆಗೆ ಮನೆ ಮಂದಿಯಲ್ಲ ಕಷ್ಟ ಪಟ್ಟಿದ್ದಾರೆ. ಕೂನೆಯ ಕ್ಷಣದಲ್ಲಿ ಸಚಿವ ಜಮೀರ್ ಅವರನ್ನು ಕಾಲಿಡಿದು ಕರೆದುಕೊಂಡು ಬಂದು ಗೆಲುವಂತಹ ಅನಿವಾರ್ಯತೆ ಎಂ.ಪಿ. ಮತ್ತು ಸಚಿವರಿಗೆ ಇರಲಿಲ್ಲ, ಸಚಿವ ಜಮೀರ್ ಅವರ ಕಾಲು ಹಿಡಿದು ನಿಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದು ತಪ್ಪಾಗಿದೆ. ನಿಮ್ಮನ್ನು ಏಕವಚನದಲ್ಲಿ ಮಾತನಾಡಿದ್ದು ತಪ್ಪಾಗಿದೆ. ನೀವು ಬಂದು ನಮ್ಮ ಪರವಾಗಿ ಮತಯಾಚನೆ ಮಾಡಿ ಎಂದು ಕೇಳಿಕೊಂಡರು. ಆದರೆ ಜಮೀರ್ ಅವರು ಸಚಿವರ ಮನೆಗೆ ಬಂದು ಊಟ ಮಾಡಿ ಹೋದರು. ಎಲ್ಲಿಯೂ ಮತಯಾಚನೆ ರ್ಯಾಲಿ ಮಾಡಲಿಲ್ಲ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !