ಕಾಲು ಮುರಿದುಕೊಂಡರೂ ಮರೆಯಲಿಲ್ಲ ವರ್ಕ್​ಔಟ್: ವ್ಯಾಯಾಮದ ವಿಡಿಯೋ ಹಂಚಿಕೊಂಡ ನಟಿ ಶಿಲ್ಪಾ ಶೆಟ್ಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೆಲ ದಿನಗಳ ಹಿಂದೆ ‘ಇಂಡಿಯನ್ ಪೊಲೀಸ್ ಫೋರ್ಸ್​’ ವೆಬ್ ಸೀರಿಸ್​ ಚಿತ್ರೀಕರಣ ವೇಳೆ ನಟಿ ಶಿಲ್ಪಾ ಶೆಟ್ಟಿ ಕಾಲು ಮುರಿದುಕೊಂಡ ಹಿನ್ನೆಲೆ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಆದರೂ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿದ್ದು, ಅಭಿಮಾನಿಗಳಿಗೆ ಸ್ಫೂರ್ತಿಯಾಗಿದೆ.

ಈ ಕುರಿತ ಪೋಸ್ಟ್ ಮಾಡಿದ ಅವರು, ವ್ಯಾಯಾಮದ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಹುರಿದುಂಬಿಸಿದ್ದಾರೆ. ಈ ವಿಡಿಯೋದಲ್ಲಿ ಅವರು ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದು. ವಿಶ್ರಾಂತಿ ಸಮಯದಲ್ಲಿ ಇದ್ದರೂ, ನಟಿ ವ್ಯಾಯಾಮಗಳಿಂದ ತಪ್ಪಿಸಿಕೊಳ್ಳುತ್ತಿಲ್ಲ.ತಮ್ಮ ಹೊಸ ವ್ಯಾಯಾಮದ ವಿಡಿಯೋವನ್ನು ಹಂಚಿಕೊಂಡ ಶಿಲ್ಪಾ ಶೆಟ್ಟಿ, ‘ಕುಳಿತುಕೊಂಡು ಏನು ಮಾಡಬೇಕು, ಸ್ವಲ್ಪ ಕೆಲಸ ಮಾಡಿ, ಸೋಮವಾರವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ವ್ಯಾಯಾಮ ಮಾಡುತ್ತೇನೆ’ ಎಂದು ಬರೆದಿದ್ದಾರೆ.

ಕೆಲ ದಿನಗಳ ಹಿಂದೆ ವೀಲ್​​ಚೇರ್​ನಲ್ಲಿ ಕುಳಿತು ಕೆಲ ಯೋಗ ಸ್ಟ್ರೆಚ್‌ಗಳನ್ನು ಮಾಡಿದ್ದ ವಿಡಿಯೋ ಕ್ಲಿಪ್ ಅನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. “ಸಮಸ್ಯೆಯು ನಿಜವಾಗಿಯೂ ಸಮಸ್ಯೆಯೇ ಅಥವಾ ಸಮಸ್ಯೆಯ ಬಗೆಗಿನ ನಮ್ಮ ಮನೋಭಾವವೇ ನಿಜವಾದ ಸಮಸ್ಯೆಯೇ?” ಎಂದು ಪ್ರಶ್ನಿಸಿದ್ದರು. ಅತ್ಯಂತ ಸರಳ ಮತ್ತು ಸುಲಭ ಯೋಗಾಭ್ಯಾಸ ಮಾಡಿ ಕಠಿಣ ಸಮಯದಲ್ಲೂ ಮಾದರಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!