Sunday, October 2, 2022

Latest Posts

SHOCKING NEWS | ಬಿಹಾರ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿಗೆ ಬಂತು ಕೊಲೆ ಬೆದರಿಕೆ ಪತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಬಿಹಾರ ಮಾಜಿ ಉಪಮುಖ್ಯಮಂತ್ರಿ, ಸಂಸದ ಸುಶೀಲ್ ಮೋದಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ. ಟಿಎಂಸಿ ನಾಯಕ ಚಂಪಾ ಸೋಮ ಎಂದು ಹೇಳಿ ಪತ್ರದಲ್ಲಿ ಬರೆಯಲಾಗಿದ್ದು, ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.

ಈ ಪತ್ರದ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವ ಸುಶೀಲ್ ಮೋದಿಗೆ ಭದ್ರತೆ ಒದಗಿಸಲಾಗಿದೆ. ಇತ್ತ ಪೊಲೀಸರು ಪತ್ರದ ಮೂಲ ಹಾಗೂ ಬೆದರಿಕೆ ಕುರಿತು ತನಿಖೆ ನಡೆಸುತ್ತಿದ್ದಾರೆ.

ಸುಶೀಲ್ ಮೋದಿ ಈ ಬೆದರಿಕೆ ಪತ್ರವನ್ನು ಪಾಟ್ನಾಎಸ್‌ಪಿ ಮಾನವ್‌ಜಿತ್ ಸಿಂಗ್ ದಿಲ್ಹೋನ್‌ಗೆ ರವಾನಿಸಿದ್ದಾರೆ. ಪತ್ರದ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪಾಟ್ನಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತೀಚೆಗೆ ಬಿಜೆಪಿ ನಾಯಕರಿಗೆ ಬೆದರಿಕೆ), ಹತ್ಯೆ ಕರೆಗಳು ಹೆಚ್ಚಾಗುತ್ತಿರುವ ಕಾರಣದಿಂದ ಈ ಬೆದರಿಕೆ ಪತ್ರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ಈ ಬೆದರಿಕೆ ಪತ್ರದಲ್ಲಿ ಏನಿದೆ?
ನಾನು ಈ ಪತ್ರದ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ. ನಾನು ತೃಣಮೂಲ ಕಾಂಗ್ರೆಸ್(TMC) ನಾಯಕ. ಮಮತಾ ಬ್ಯಾನರ್ಜಿ ಮುಂದಿನ ಪ್ರಧಾನಿ. ನೀವೆಲ್ಲಾ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನಾಯಿಗಳು. ಮಮತಾ ಬ್ಯಾನರ್ಜಿಹಾಗೂ ನಿತೀಶ್ ಕುಮಾರ್ ಜಿಂದಾಬಾದ್..ನಿನ್ನನ್ನು ಹತ್ಯೆ ಮಾಡುತ್ತೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಕೊನೆಯಲ್ಲಿ ಚಂಪಾ ಸೋಮ್ ಎಂದು ಹೆಸರು ಉಲ್ಲೇಖಿಸಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!