June 4, 2026
Thursday, June 4, 2026
spot_img

ಭಾರತ ತಂಡ ಇಲ್ಲದಿದ್ದರೂ ಭಾರತೀಯರದ್ದೇ ಹವಾ: ಫಿಫಾ ವೇದಿಕೆಯಲ್ಲಿ ಮಿಂಚಲಿರುವ ನಾಲ್ವರು ಆಟಗಾರರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತಿನ ಅತಿದೊಡ್ಡ ಫುಟ್ಬಾಲ್ ಟೂರ್ನಿಗೆ ಭಾರತ ಎಂಟ್ರಿ ಪಡೆಯದಿದ್ದರೂ, ಭಾರತೀಯ ಮೂಲದ ಆಟಗಾರರ ಹಾಜರಿ ಮಾತ್ರ ಈ ಬಾರಿ ವಿಶೇಷ ಆಕರ್ಷಣೆಯಾಗಿದೆ.

ಅಮೆರಿಕ, ಮೆಕ್ಸಿಕೋ ಹಾಗೂ ಕೆನಡಾ ಆತಿಥ್ಯದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್, ಕತಾರ್, ಆಸ್ಟ್ರೇಲಿಯಾ ಹಾಗೂ ಕಾಂಗೊ ತಂಡಗಳಲ್ಲಿ ನಾಲ್ವರು ಆಟಗಾರರು ಸ್ಥಾನ ಪಡೆದು ಕುತೂಹಲ ಮೂಡಿಸಿದ್ದಾರೆ.

ನ್ಯೂಜಿಲೆಂಡ್ ಪರ ಸರ್ಪ್ರೀತ್ ಸಿಂಗ್

ಪಂಜಾಬ್ ಮೂಲದ ಕುಟುಂಬಕ್ಕೆ ಸೇರಿದ ಸರ್ಪ್ರೀತ್ ಸಿಂಗ್ ನ್ಯೂಜಿಲೆಂಡ್‌ನಲ್ಲಿ ಜನಿಸಿ ಬೆಳೆದವರು. ಹಲವು ವರ್ಷಗಳಿಂದ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಭಾಗವಾಗಿರುವ ಅವರು ಮತ್ತೊಮ್ಮೆ ವಿಶ್ವಕಪ್ ವೇದಿಕೆಯಲ್ಲಿ ಗಮನ ಸೆಳೆಯುವ ನಿರೀಕ್ಷೆಯಲ್ಲಿದ್ದಾರೆ.

ಕತಾರ್ ತಂಡದಲ್ಲಿ ತಹ್ಸಿನ್ ಮೊಹಮ್ಮದ್

ಕೇರಳ ಮೂಲದ ಕುಟುಂಬದ ತಹ್ಸಿನ್ ಮೊಹಮ್ಮದ್ ಯುವ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಕಿರಿಯ ವಯಸ್ಸಿನಲ್ಲೇ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅವರು ಈಗ ವಿಶ್ವಕಪ್ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಆಸ್ಟ್ರೇಲಿಯಾದ ನಿಶಾನ್ ವೇಲುಪಿಳ್ಳೈ

ಬಹುಸಾಂಸ್ಕೃತಿಕ ಹಿನ್ನೆಲೆಯ ನಿಶಾನ್ ವೇಲುಪಿಳ್ಳೈ ಆಸ್ಟ್ರೇಲಿಯಾ ಪರ ಆಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ತಮ್ಮ ಪ್ರದರ್ಶನದಿಂದ ಗಮನ ಸೆಳೆದಿರುವ ಅವರು ವಿಶ್ವಕಪ್‌ನಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ.

ಕಾಂಗೊ ತಂಡದ ಸ್ಯಾಮುಯೆಲ್ ಮುತ್ತುಸ್ವಾಮಿ

ತಮಿಳು ಮೂಲದ ತಂದೆಯ ಪುತ್ರನಾದ ಸ್ಯಾಮುಯೆಲ್ ಮುತ್ತುಸ್ವಾಮಿ ಹಲವು ವಿದೇಶಿ ಕ್ಲಬ್‌ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಈಗ ಕಾಂಗೊ ಗಣರಾಜ್ಯ ತಂಡದ ಪರ ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

20 ವರ್ಷಗಳ ಬಳಿಕ ಮತ್ತೆ ಭಾರತೀಯ ಮೂಲದ ಆಟಗಾರರ ಹಾಜರಿ

ಫಿಫಾ ವಿಶ್ವಕಪ್‌ನಲ್ಲಿ ಭಾರತೀಯ ಮೂಲದ ಆಟಗಾರರು ಕಾಣಿಸಿಕೊಳ್ಳುತ್ತಿರುವುದು ಎರಡು ದಶಕಗಳ ಬಳಿಕದ ವಿಶೇಷ ಕ್ಷಣವಾಗಿದೆ. ಇದು ವಿಶ್ವ ಫುಟ್ಬಾಲ್‌ನಲ್ಲಿ ಭಾರತೀಯ ಬೇರುಗಳ ಪ್ರಭಾವ ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !