‘ಕನಸಿನಲ್ಲಿ ಎಲ್ಲಾ ನನ್ನ ಬಿಟ್ಟು ಹೋಗಿದ್ರು, ದಿನವೂ ಅಳುತ್ತಲೇ ಏಳುತ್ತಿದ್ದೆ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಶ್ಮಿಕಾ ಮಂದಣ್ಣ ಇದೀಗ ಎಲ್ಲಾ ಇಂಡಸ್ಟ್ರಿಯಲ್ಲಿಯೂ ಬಹುಬೇಡಿಕೆಯ ನಟಿ. ಸಣ್ಣ ವಯಸ್ಸಿನಲ್ಲಿಯೇ ಇಷ್ಟೆಲ್ಲಾ ಸಾಧನೆ ಮಾಡೋದಕ್ಕೆ ಸಹಾಯ ಮಾಡಿದ್ದು ಬೇರ‍್ಯಾರು ಅಲ್ಲ, ಟ್ರೋಲರ‍್ಸ್ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

ವಿಜಯ್ ದೇವರಕೊಂಡ ಜತೆ ಗೀತಾಗೋವಿಂದಂ ಹಾಗೂ ಡಿಯರ್ ಕಾಮ್ರೆಡ್ ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದಾರೆ. ಈ ಎರಡೂ ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್‌ಗಳಿದ್ದು, ಇದರಿಂದ ರಶ್ಮಿಕಾ ಭಾರೀ ಟ್ರೋಲ್ ಆಗಿದ್ದರು. ಆಗಿನ್ನು ತೆಲುಗು ಸಿನಿಮಾಗಳಲ್ಲಿ ರಶ್ಮಿಕಾ ನಟಿಸೋಕು ಶುರು ಮಾಡಿದ್ದು, ಈ ಸೀನ್‌ಗಳಿಗಾಗಿ ರಶ್ಮಿಕಾರನ್ನು ಹೀಯಾಳಿಸಲಾಗಿತ್ತು. ಈ ಬಗ್ಗೆ ರಶ್ಮಿಕಾ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ನೋವಿನ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.
PHOTO: Rashmika Mandanna leaves us spellbound with oodles of shine in a  sequin and pearl lehenga | PINKVILLAಪ್ರತಿದಿನ ನೂರಾರು ಟ್ರೋಲ್ಸ್, ನನ್ನ ಚಿಕ್ಕ ವಯಸ್ಸಿನ ಫೋಟೊ ಮೇಲೆಯೂ ಕೆಟ್ಟ ಕಮೆಂಟ್ಸ್ ಮಾಡಿ ಮನಸ್ಸು ನೋಯಿಸಿದ್ದರು. ಎಲ್ಲರೂ ನನ್ನನ್ನು ಬಿಟ್ಟು ಹೋಗುತ್ತಾರೆ, ನಾನು ಮಾಡುತ್ತಿರುವುದು ತಪ್ಪಾ ಎನ್ನುವ ಅನುಮಾನ ಬಂದಿತ್ತು. ಮನೆಯಲ್ಲಿ ಒಬ್ಬರಿಗೂ ನನ್ನ ನೋವು ಹೇಳಿಕೊಂಡಿಲ್ಲ. ರಾತ್ರಿ ಕನಸಿನಲ್ಲಿಯೂ ಎಲ್ಲಾ ನನ್ನನ್ನು ಬಿಟ್ಟು ಹೋಗಿದ್ರು. ನಾನು ಒಂಟಿಯಾಗಿದ್ದೆ. ಅಳುತ್ತಲೇ ಏಳುತ್ತಿದ್ದೆ ಎಂದು ರಶ್ಮಿಕಾ ಹೇಳಿದ್ದಾರೆ.

Rashmika Mandanna aka Pushpa's Srivalli chased by BIG jewellery brands,  find out why! | Regional News | Zee Newsಈ ಎಲ್ಲಾ ಟ್ರೋಲ್ಸ್‌ನಿಂದ ಇನ್ನಷ್ಟು ಗಟ್ಟಿಯಾಗಿದ್ದೇನೆ, ಯಾರು ಏನೇ ಅಂದ್ರೂ ಈಗ ನನಗೆ ಅದು ತಾಗೋದಿಲ್ಲ, ಇಗ್ನೋರ್ ಮಾಡಿ ನನ್ನ ಕೆಲಸದ ಮೇಲೆ ಎಲ್ಲಾ ನಿಗಾ ಇಟ್ಟಿದ್ದೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!