ಮೇಷ
ಬಿಡುವಿಲ್ಲದ ಕಾರ್ಯ. ದಿನವಿಡೀ ಒತ್ತಡ. ಕುಟುಂಬದ ಕಡೆಗೂ ಗಮನ ಕೊಡಿ.ಸಣ್ಣ ಕೊರಗೊಂದು ಮನಸ್ಸು ಕೆಡಿಸಲಿದೆ.
ವೃಷಭ
ಭಾವುಕ ವಿಷಯ ಗಳಲ್ಲಿ ಪ್ರಾಕ್ಟಿಕಲ್ ಆಗಿ ವರ್ತಿಸಿರಿ. ಮಾನಸಿಕ ನೋವು ತಿನ್ನುವುದು ತಪ್ಪಬಹುದು. ಹಣದ ಒತ್ತಡ ಸಂಭವ.
ಮಿಥುನ
ಬಂಧುಗಳ ಜತೆ ಜಗಳವಾದೀತು. ಅವರ ವರ್ತನೆ ನಿಮಗೆ ರೋಷ ಬರಿಸಬಹುದು. ಆರ್ಥಿಕ ಒತ್ತಡ ಹೆಚ್ಚು. ಖರ್ಚು ನಿಯಂತ್ರಿಸಿರಿ.
ಕಟಕ
ಸಣ್ಣ ವಿಷಯ ಮನಸ್ಸಿನ ಶಾಂತಿ ಕದಡು ವುದು. ಪರಿಹಾರ ಕಾರ್ಯ ವಿಳಂಬ. ಕಾರ್ಯ ಸಾಧನೆಗೆ ಕೌಟುಂಬಿಕ ಸಹಕಾರ ಅಗತ್ಯ.
ಸಿಂಹ
ಆತ್ಮೀಯ ಸಂಬಂಧ ಕಾಯ್ದುಕೊಳ್ಳಲು ಕಷ್ಟ ಪಡುವಿರಿ. ಅವರ ಭಾವನೆಗೂ ಬೆಲೆ ಕೊಡಿ. ಕೆಲವರ ಬಗೆಗಿನ ಪೂರ್ವಗ್ರಹ ತ್ಯಜಿಸಿರಿ.ಇಂದು ನೀವು ಮುಟ್ಟಿದ್ದೆಲ್ಲಾ ಚಿನ್ನ
ಕನ್ಯಾ
ಇತರರ ಕುರಿತಾದ ಅಸೂಯೆಯಿಂದ ಹೊರಬನ್ನಿ. ಅದು ನಿಮ್ಮ ಮನಶ್ಯಾಂತಿ ಹಾಳು ಮಾಡುತ್ತಿದೆ. ನಿಮ್ಮ ಸಾಧನೆಗೆ ಗಮನ ಕೊಡಿ.
ತುಲಾ
ಕೆಲವು ವಿಷಯ ಸಣ್ಣದೆಂದು ಕಡೆಗಣಿಸದಿರಿ.ಅದು ದೊಡ್ಡ ಪರಿಣಾಮ ಉಂಟು ಮಾಡೀತು. ಅನ್ಯರ ಜತೆಗಿನ ಭಿನ್ನಮತ ಪರಿಹರಿಸಿ.
ವೃಶ್ಚಿಕ
ಇತರರ ಸಮಸ್ಯೆ ಪರಿಹರಿಸುವ ಪ್ರಯತ್ನದಲ್ಲಿ ನೀವೇ ಸಮಸ್ಯೆಗೆ ಸಿಲುಕದಿರಿ. ಮೆಚ್ಚಿನ ಹವ್ಯಾಸದಿಂದ ಮಾನಸಿಕ ನೆಮ್ಮದಿ ಪಡೆಯುವಿರಿ.
ಧನು
ಮನೆ ಮತ್ತು ವ್ಯವಹಾರ ಎರಡರಲ್ಲೂ ಸಮಸ್ಯೆ ಕಾಡುವುದು. ಅದನ್ನು ಕೂಡಲೇ ಪರಿಹರಿಸಿ. ಆಪ್ತರ ಜತೆಗಿನ ಸಂಬಂಧದಲ್ಲಿ ಬಿರುಕು.
ಮಕರ
ಉತ್ಸಾಹಭಂಗ ವಾಗುವ ಬೆಳವಣಿಗೆ ಸಂಭವ. ಜಾಣತನದಿಂದ ನಿಭಾಯಿಸಿ. ಸಾಂಸಾರಿಕ ತಾಪತ್ರಯ ಬೇಸರ ತರುವುದು.
ಕುಂಭ
ಬಾಕಿಯುಳಿದ ವ್ಯವಹಾರ ಪೂರ್ಣ ಗೊಳಿಸಿ. ಅದನ್ನು ಹಾಗೇ ಬಿಡಬೇಡಿ. ಸಮಸ್ಯೆ ಪರಿಹರಿಸಲು ಆತ್ಮೀಯರ ನೆರವು ಸಿಕ್ಕೀತು.
ಮೀನ
ಸಣ್ಣಪುಟ್ಟ ವಾಗ್ವಾದ, ಸಂಘರ್ಷ ನಡೆದೀತು. ಹೊಂದಾಣಿಕೆಯಿಂದ ನಡಕೊಳ್ಳಿ. ವ್ಯವಹಾರದಲ್ಲಿ ಮುಕ್ತ ಮನಸ್ಸು ಇರಲಿ. ಮುಚ್ಚುಮರೆ ಬೇಡ.



