ಅಗ್ನಿಪಥ ಅರ್ಜಿದಾರರಿಗೆ ಉಚಿತ ತರಬೇತಿ ನೀಡುತ್ತಿರುವ ಮಾಜಿ ಸೈನಿಕರು!

– ಶಿವಲಿಂಗಯ್ಯ ಹೋತಗಿಮಠ

ಭಾರತೀಯ ರಕ್ಷಣಾ ಇಲಾಖೆಯ ಅಗ್ನಿಪಥ ಯೋಜನೆಯಡಿಯಲ್ಲಿ ಆಯ್ಕೆ ಬಯಸಿ ಅರ್ಜಿ ಸಲ್ಲಿಸಿದ ಯುವಕರಿಗೆ ಗ್ರಾಮೀಣ ಮತ್ತು ನಗರ ಭಾಗದಲ್ಲಿ ದೈಹಿಕ ತರಬೇತಿಯ ಅವಶ್ಯಕತೆ ಇರುವುದನ್ನು ಮನಗಂಡು ಮಾಜಿ ಸೈನಿಕರಿಂದ ಫಿಸಿಕಲ್ ಸಲಹೆ, ಸೂಚನೆ ಮತ್ತು ತರಬೇತಿ ನೀಡಲು ಮುಂದಾಗಿದ್ದಾರೆ. ಲಕ್ಷ್ಮೇಶ್ವರ ಪಟ್ಟಣದ ಯುವಕ ಸೋಮೇಶ ಉಪನಾಳ ಅವರ ಪ್ರಾಯೋಜಕತ್ವದಲ್ಲಿ ಐದು ಜನ ಮಾಜಿ ಸೈನಿಕರಿಂದ ಕಳೆದ 4 ದಿನಗಳಿಂದ ಪಟ್ಟಣದ ಉಮಾ ವಿದ್ಯಾಲಯದ ಮೈದಾನದಲ್ಲಿ ಉಚಿತವಾಗಿ ಅಗ್ನಿಪಥ ಸೇರ ಬಯಸುವ ಯುವಕರಿಗೆ ಉಚಿತ ತರಬೇತಿ ಕೊಡುತ್ತಿದ್ದಾರೆ. ಒಂದು ವಾರ ನಡೆಯುವ ಈ ತರಬೇತಿಗೆ ಸುತ್ತ ಮುತ್ತ ಗ್ರಾಮದಿಂದ 60 ಯುವಕರು ತರಬೇತಿ ಪಡೆಯುತ್ತಿದ್ದು ಪ್ರತಿದಿನ ಮುಂಜಾನೆ 6 ಗಂಟೆಯಿಂದ 8 ಗಂಟೆವರೆಗೆ ತರಬೇತಿ ನಡೆಯುತ್ತಿದೆ.

ಉಚಿತವಾಗಿ ಅಗ್ನಿಪಥಗೆ ತರಬೇತಿಯನ್ನು ನೀಡಲಾಗುತ್ತಿದ್ದು, ಇದರಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಂಡು ತರಬೇತುದಾರ ನಿವೃತ್ತ ಮಾಜಿ ಕ್ಯಾಪ್ಟನ್ ಮೃತ್ಯುಂಜಯ ಹಾವೇರಿಮಠ, ಮಾಜಿ ಸುಬೇದಾರ್ ಮೇಜರ್ ಚನ್ನಬಸಪ್ಪ ಹುಡೇದ, ಮಾಜಿ ಸೈನಿಕರಾದ ಅಶೋಕ್ ಪ್ಯಾಟಿ , ಈರಣ್ಣ ಅಣ್ಣಿಗೇರಿ, ಬಸವರಾಜ ಸೂರಣಗಿ, ಮತ್ತು ಸಂಚಾಲಕ ಸೋಮೇಶ ಉಪನಾಳ ತರಬೇತಿ ನೀಡುತ್ತಿದ್ದಾರೆ.

ತರಬೇತಿಯ ವಿಶೇಷ:
ದೈಹಿಕ ಪರೀಕ್ಷೆಗೆ ಬೇಕಾದ ತರಬೇತಿ ಇಲ್ಲಿ ನೀಡಲಾಗುತ್ತಿದ್ದು, ರನ್ನಿಂಗ, ಚಿನ್ನಪ, 9 ಫೀಟ್ ಲಾಂಗ್ ಜಂಪ್, ಕಟ್ಟಿಗೆ ಮೇಲೆ ಜಿಗ್ ಜಾಗ್ ವಾಕ್ ಸೇರಿದಂತೆ ಸೈನಿಕ ತರಬೇತಿ ನೀಡಲಾಗುತ್ತಿದೆ.

ಆರೋಗ್ಯ ಹಾಗ ಯೋಗ, ಧ್ಯಾನದ ಬಗ್ಗೆ ಇಲ್ಲಿ ಹೇಳಿಕೊಡಲಾಗುತ್ತಿದ್ದು, ಕೆಲವು ನಿಮಿಷಗಳ ಕಾಲ ಯೋಗ ತರಬೇತಿ ನೀಡಲಾಗುತ್ತಿದೆ. ಯುವಕರು ಸೈನಿಕರಾಗಲು ಅರೋಗ್ಯ ಮಹತ್ವದಾಗಿದ್ದು ಅರೋಗ್ಯ ಕಾಪಾಡಕೊಳ್ಳಲು ಸಲಹೆ ಕೊಡುತ್ತಿದ್ದಾರೆ. ಪ್ರತಿ ರವಿವಾರ ತರಬೇತಿದಾರರಿಗೆ ವಿಶೇಷ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!