ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಟ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ತನ್ನ ಬಹುಕಾಲದ ಗೆಳತಿ ಅವಿವಾ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂಬಿ ಪುತ್ರನ ಮದುವೆ ಸಮಾರಂಭಕ್ಕೆ ಹಿರಿಯ ಸಿನಿ ಗಣ್ಯರು, ಸ್ಯಾಂಡಲ್ ವುಡ್ ನಟ, ನಟಿಯರು ಆಗಮಿಸಿ ಶುಭ ಹಾರೈಸಿದರು.
ನಟ ಕಿಚ್ಚ ಸುದೀಪ್ ಕೂಡ ಅಂಬಿ ಪುತ್ರನ ಮದುವೆಗೆ ಆಗಮಿಸಿ ನೂತನ ಜೋಡಿಗೆ ಶುಭ ಹಾರೈಸಿದರು. ಮದುವೆಗೆ ಉಡುಗೊರೆಯಾಗಿ ನಟ ಸುದೀಪ್ ಚಿನ್ನದ ಸರ ನೀಡಿದ್ದು, ಅಭಿಷೇಕ್ ಕೊರಳಿಗೆ ಚಿನ್ನದ ಸರ ಹಾಕಿ ಪ್ರೀತಿಯಿಂದ ತಬ್ಬಿ ಅಭಿಗೆ ಸುದೀಪ್ ಶುಭ ಹಾರೈಸಿದ್ದಾರೆ.