ಹೊಸ ದಿಗಂತ ಡಿಜಿಟಲ್ ಡೆಸ್ಕ್:
‘ಚಕ್ರವರ್ತಿ ಸೂಲಿಬೆಲೆ ಮತ್ತು ಸಂಘ ಪರಿವಾರದವರ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ವಿಜಯಪುರದಲ್ಲಿ ಭಾನುವಾರ ನೀಡಿದ್ದ ಹೇಳಿಕೆ ಬಗ್ಗೆ ನಟ ಹಾಗೂ ರಾಜ್ಯಸಭಾ ಬಿಜೆಪಿ ಸಂಸದ ಜಗ್ಗೇಶ್ ಟ್ವೀಟ್ ಮಾಡಿ ತಿರುಗೇಟು ನೀಡಿದ್ದು, ‘ಚಕ್ರವರ್ತಿ ಸೂಲಿಬೆಲೆ ಅವರ ಬೆನ್ನಿಗೆ ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಿದೆ’ ಎಂದು ಹೇಳಿದ್ದಾರೆ.
‘ಸೂಲಿಬೆಲಿರವರು ಯಾವ ಅಧಿಕಾರದ ಹಿಂದೆ ಹೋಗದೆ ಸಾಂಸ್ಕೃತಿಕ, ತತ್ವ, ವಿಚಾರ, ಕೆರೆಕಟ್ಟೆ ಪುನರ್ಜೀವನ, ಪ್ರವಚನದಂತ ಸಾತ್ವಿಕ ಚಿಂತಕ. ಅವರನ್ನು ಜೈಲಿಗೆ ಹಾಕುವೆ ಎಂದರೆ, ಅಲ್ಲಿಗೆ ಗೆದ್ದು ತಿಂಗಳಿಗೆ ಈ ಮಾತು ಎಂ.ಬಿ. ಪಾಟೀಲ್ ಬಾಯಲ್ಲಿ! ಮಾನ್ಯರೆ ಕಾನೂನು ನಿಮ್ಮ ಜೇಬಲ್ಲಿ ಇದೆಯ?ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಿದೆ ಅವರ ಬೆನ್ನಿಗೆ’ ಎಂದಿದ್ದಾರೆ.
ಜಗ್ಗೇಶ್ ಅವರ ಈ ಟ್ವೀಟ್‌ಗೆ ಪರ-ವಿರೋಧ ಚರ್ಚೆಯಾಗುತ್ತಿದೆ.