ಆಫ್ರಿಕಾದಲ್ಲಿ ಸ್ಫೋಟಕ ತುಂಬಿದ್ದ ಲಾರಿ ಅಪಘಾತ: 17 ಸಾವು, ನೂರಾರು ಮನೆಗಳು ಛಿದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಫ್ರಿಕಾದ ಘಾನದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, 17  ಮಂದಿ ಮೃತಪಟ್ಟಿದ್ದಾರೆ.
ಘಾನದ ಪಶ್ಚಿಮದಲ್ಲಿರುವ ಬೊಗೊಸೊ ಪಟ್ಟಣದಲ್ಲಿ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದೆ.
ಚಿನ್ನದ ಗಣಿಗೆ ಸ್ಫೋಟಕ ಸಾಗಿಸುತ್ತಿದ್ದ ಟ್ರಕ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಬೆಂಕಿ ಎರಡೂ ವಾಹನಕ್ಕೂ ಆವರಿಸಿದೆ.

ಇದರಿಂದ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಅಪಘಾತ ಸ್ಥಳದ ಸಮೀಪ ಇದ್ದ ನೂರಾರು ಮನೆಗಳು ನಾಶವಾಗಿದೆ. ಸದ್ಯ 17ಮಂದಿಯ ಸಾವಿನ ಬಗ್ಗೆ ಮಾತ್ರ ಮಾಹಿತಿ ದೊರತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಮನೆಗಳು ನಾಶವಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!