ವಂಚನೆ ತಡೆಯೋಕೆ ಬ್ಯಾಂಕುಗಳಿಗೆ ʼಫೇಸ್‌ ಸ್ಕ್ಯಾನ್‌ʼ ಅನುಮತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ತೆರಿಗೆ ವಂಚನೆ, ಮೋಸ ಇತ್ಯಾದಿ ಪ್ರಕರಣಗಳನ್ನು ತಡೆಗಟ್ಟಲು ಕೆಲ ಸಂದರ್ಭಗಳಲ್ಲಿ ಫೇಸ್‌ ಸ್ಕ್ಯಾನ್ (ಮುಖ ಪರಿಶೀಲನೆ) ತಂತ್ರಜ್ಞಾನವನ್ನು ಬಳಸಲು ಬ್ಯಾಂಕುಗಳಿಗೆ ಸರ್ಕಾರ ಅನುಮತಿ ನೀಡಿದೆ. ವಾರ್ಷಿಕ ವಹಿವಾಟು ಮೀರಿದ ಸಂದರ್ಭದಗಳಲ್ಲಿ ವ್ಯಕ್ತಿಯ ಗುರುತನ್ನು ಖಚಿತ ಪಡಿಸಿಕೊಳ್ಳಲು ಈ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯೀಟರ್ಸ್‌ ವರದಿ ಮಾಡಿದೆ.

ಕೆಲವು ದೊಡ್ಡ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್‌ಗಳು ಈ ಆಯ್ಕೆಯನ್ನು ಬಳಸಲು ಪ್ರಾರಂಭಿಸಿವೆ ಎನ್ನಲಾಗಿದ್ದು ಈ ಪರಿಶೀಲನೆಯು ಕಡ್ಡಾಯವೇನಲ್ಲ, ಆದರೆ PAN ಕಾರ್ಡ್ ಅನ್ನು ಬ್ಯಾಂಕ್‌ಗಳೊಂದಿಗೆ ಹಂಚಿಕೊಳ್ಳದ ಸಂದರ್ಭಗಳಲ್ಲಿ ಇದು ಬಳಕೆಯಾಗುತ್ತದೆ ಎನ್ನಲಾಗಿದೆ.

ಈ ವರ್ಷದ ಆರಂಭದ ವಾರಗಳಲ್ಲಿ ಹೊಸ ಗೌಪ್ಯತೆ ಕಾನೂನಿಗೆ ಸಂಸತ್ತಿನ ಅನುಮೋದನೆ ಪಡೆಯುವುದಾಗಿ ಸರ್ಕಾರ ಹೇಳಿದೆ ಎಂದು ಮೂಲಗಳ ವರದಿ ಉಲ್ಲೇಖಿಸಿದೆ.

ಒಂದು ಹಣಕಾಸು ವರ್ಷದಲ್ಲಿ ₹ 20 ಲಕ್ಷಕ್ಕಿಂತ ಹೆಚ್ಚು ಠೇವಣಿ ಮಾಡುವ ಮತ್ತು ಹಿಂಪಡೆಯುವ ವ್ಯಕ್ತಿಗಳ ಗುರುತನ್ನು ಪರಿಶೀಲಿಸಲು ಹೊಸ ಕ್ರಮಗಳನ್ನು ಬಳಸಬಹುದು ಎನ್ನಲಾಗಿದೆ. ಆಧಾರ್‌ ಕಾರ್ಡ್‌ನಲ್ಲಿ ನಮೂದಿತವಾಗಿರುವ ಬೆರಳಚ್ಚು, ಕಣ್ಣು ಇತ್ಯಾದಿ ಮಾಹಿತಿಗಳನ್ನೊಳಗೊಂಡು ಫೇಸ್‌ ಸ್ಕ್ಯಾನ್‌ ಕಾರ್ಯನಿರ್ವಹಿಸಲಿದೆ.

ಆದರೆ ಈ ಕುರಿತು ಭದ್ರತಾ ಕಾಳಜಿಯನ್ನೂ ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು ಎಂದು ಸೈಬರ್‌ ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!