Saturday, December 9, 2023

Latest Posts

ಸ್ಟಂಟ್‌ ಮಾಡುವಲ್ಲಿ ಫೇಲ್‌ ಆದ ಯುವಕ: ವಿಡಿಯೋ ಹಂಚಿಕೊಂಡ ದೆಹಲಿ ಪೊಲೀಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ ಪೊಲೀಸರು ರಸ್ತೆ ಸುರಕ್ಷತೆಯ ಬಗ್ಗೆ ಜನರಿಗೆ ಆಗಾಗ ಸೂಚನೆ ನೀಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಯುವಕನೊಬ್ಬ ಸೈಕಲ್ ಸ್ಟಂಟ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡುತ್ತಾ ಒಳ್ಳೆಯ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ವಿವಿಧ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ವಿಶೇಷವಾಗಿ ಸೈಬರ್ ಅಪರಾಧ ಮತ್ತು ರಸ್ತೆ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳನ್ನು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್‌ಗಳ ಮೂಲಕ ಜನರು ಸುರಕ್ಷಿತವಾಗಿರಲು ಮತ್ತು ಎಚ್ಚರವಾಗಿರುವಂತೆ ಸೂಚಿಸುತ್ತಾರೆ.

ಆದರೆ ಇತ್ತೀಚೆಗೆ, ದೆಹಲಿ ಪೊಲೀಸ್ delhi.police_official ಅವರು ತಮ್ಮ ಅಧಿಕೃತ Instagram ಖಾತೆಯಲ್ಲಿ ಹಂಚಿಕೊಂಡ ಮತ್ತೊಂದು ವೀಡಿಯೊ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಯುವಕನೊಬ್ಬ ಸೈಕಲ್ ಸ್ಟಂಟ್‌ ಮಾಡಲು ಹೋಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ರೀತಿಯ ಸ್ಟಂಟ್‌ಗಳು ಆಘಾತಕಾರಿ, ‘ರಸ್ತೆಯಲ್ಲಿ ಸುರಕ್ಷಿತವಾಗಿರಿ’ ಎಂಬ ಶೀರ್ಷಿಕೆಯೊಂದಿಗೆ ದೆಹಲಿ ಪೊಲೀಸರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!