Sunday, November 27, 2022

Latest Posts

ಪ್ರೀತಿಯಲ್ಲಿ ಬಿದ್ದಿದ್ದಾರಾ ಸಮಂತಾ, ಈ ಸಂದೇಶದ ಅರ್ಥ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿವೋರ್ಸ್ ನಂತರ ಸಮಂತಾ ಸಿನಿಮಾಗಳ ಮೇಲೆ ಹೆಚ್ಚು ಗಮನ ಇಟ್ಟಿದ್ದಾರೆ. ಸದ್ಯಕ್ಕೆ ಡೇಟಿಂಗ್ ಬಗ್ಗೆ ಆಸಕ್ತಿಯೂ ಇಲ್ಲ ಎನ್ನುವಂತೆ ಮಾತನಾಡಿದ್ದಾರೆ. ಆದರೆ ಅವರ ಟೀ ಶರ್ಟ್ ಬೇರೇನೇ ಕಥೆ ಹೇಳಿದಂತಿದೆ.

ಸಮಂತಾಗೆ ಅನಾರೋಗ್ಯ ಕಾಡುತ್ತಿದ್ದು, ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಡೌನ್ ನಾಟ್ ಔಟ್ ಎನ್ನುವ ಫೋಟೊ ಹಾಕಿದ್ದರು. ಇದೀಗ ನೀವು ಯಾವಾಗೂ ಒಬ್ಬಂಟಿಯಾಗಿ ಇರೋದಕ್ಕೆ ಆಗುವುದಿಲ್ಲ ಎನ್ನುವ ಟೀ ಶರ್ಟ್ ಹಾಕಿ ಪೋಸ್ ನೀಡಿದ್ದಾರೆ. ಇದರಲ್ಲಿ ಸಮಂತಾ ಮುಖ ಕಾಣುತ್ತಿಲ್ಲ. ಬರೀ ಟೀ ಶರ್ಟ್ ಕಾಣುವಂಥ ಫೋಟೊ ಅಪ್‌ಲೋಡ್ ಮಾಡಿದ್ದು, ಇವರು ಡೇಟ್ ಮಾಡ್ತಿರುವ ಹುಡುಗ ಯಾರಿರಬಹುದು ಎನ್ನುವ ಕುತೂಹಲ ಫ್ಯಾನ್ಸ್‌ಗಿದೆ.

ಇನ್ನು ನಾಗಚೈತನ್ಯ ಕೂಡ ಡೇಟಿಂಗ್‌ನಲ್ಲಿ ಇರುವ ಸುದ್ದಿ ಎಲ್ಲೆಡೆ ಹರಿದಾಡಿದ್ದು, ಸಮಂತಾ ಈ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!