ಬೋರ್‌ವೆಲ್‌ನಲ್ಲಿ ಬಗೆದಷ್ಟೂ ಮದ್ಯ: ಬಾಯ್ಮೇಲೆ ಬೆರಳಿಟ್ಟ ಪೊಲೀಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೋರ್‌ವೆಲ್‌ ಪಂಪ್ ಹೊಡೆದರೆ ಸಾಮಾನ್ಯವಾಗಿ ಭೂಮಿಯಿಂದ ಬರೋದು ನೀರು ಮಾತ್ರ, ಆದರೆ ಮಧ್ಯಪ್ರದೇಶದಲ್ಲಿ ಬೋರ್‌ವೆಲ್ ಪಂಪ್‌ ಹೊಡೆಯುತ್ತಿದ್ದರೆ, ಹೇರಳವಾಗಿ ಮದ್ಯ ಕಂಡುಬರುತ್ತಿದೆ. ಇದನ್ನು ಕಂಡ ಪೊಲೀಸರು ಬೆಚ್ಚಿಬಿದ್ದಿದ್ದಾರೆ.

ಮಧ್ಯಪ್ರದೇಶದಲ್ಲಿ ಡ್ರಗ್ಸ್ ವಿರುದ್ಧ ದೊಡ್ಡ ಮಟ್ಟದ ಅಭಿಯಾನ ನಡೆಯುತ್ತಿದೆ. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಮಾದಕ ವಸ್ತುಗಳ ಚಲನವಲನ ಮತ್ತು ಬಳಕೆ ಬಗ್ಗೆ ನಿಗಾ ವಹಿಸುವಂತೆ ಪೊಲೀಸರಿಗೆ ಆದೇಶಿಸಿದರು. ಆದೇಶದ ಹಿನ್ನೆಲೆ ಪೊಲೀಸರು ದಾಳಿ ನಡೆಸಿದ್ದು, ಗುನಾದ ಬೋರ್‌ವೆಲ್‌ ಪಂಪ್‌ ಅನ್ನು ಶೋಧಿಸಿದರು. ಬೋರ್‌ವೆಲ್‌ ಪಂಪ್‌ ಹೊಡೆಯುತ್ತಿದ್ದಂತೆ ಮದ್ಯ ಹೊರಬರುವುದನ್ನು ಕಂಡ   ಅಬಕಾರಿ ಅಧಿಕಾರಿಗಳೇ ಶಾಕ್‌ ಆಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ಲಿಕ್ಕರ್ ಮಾಫಿಯಾ ಜಾಣ್ಮೆಗೆ ಸಾಕ್ಷಿಯಂತಿದೆ. ಲಿಕ್ಕರ್ ಮಾಫಿಯಾ ಯಾವುದೇ ಅನುಮಾನ ಬಾರದಂತೆ ಅಕ್ರಮ ಮದ್ಯ ಮಾರಾಟ ಮಾಡಲು ಹ್ಯಾಂಡ್ ಪಂಪ್ ಹಾಕಿಕೊಂಡಿದೆ. ಅಕ್ರಮ ಮದ್ಯದಂಗಡಿಗಳ ಮೇಲೆ ಪೊಲೀಸರು ನಡೆಸಿದ ದಾಳಿಯಲ್ಲಿ ಸುಮಾರು 6,000 ಲೀಟರ್ ಕಲಬೆರಕೆ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಭಾನಪುರದಲ್ಲಿ ಆರೋಪಿಗಳು ಟ್ಯಾಂಕ್ ಅನ್ನು ನೆಲದಲ್ಲಿ ಹೂತು ಕೈ ಪಂಪ್ ಅಳವಡಿಸಿರುವುದು ಕಂಡುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!