ಮಹಿಳೆ ಹೊಟ್ಟೆಯಲ್ಲಿತ್ತು 18 ಕೆ.ಜಿ. ತೂಕದ ಗೆಡ್ಡೆ

ಹೊಸದಿಗಂತ ವರದಿ,ಮಂಡ್ಯ:

ಮಹಿಳೆಯ ಹೊಟ್ಟೆಯಲ್ಲಿದ್ದ 18 ಕೆ.ಜಿ. ತೂಕದ ಗೆಡ್ಡೆ (ಜಿಸ್ಟ್)ಯನ್ನು ಮಂಡ್ಯ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯ ಶಸ ವಿಭಾಗದ ತಜ್ಞ ವೈದ್ಯರು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಚನ್ನಪಟ್ಟಣದ ಅಮಿದಾಬಾನು (42) ಎಂಬುವವರೇ 18 ಕೆ.ಜಿ. ಗೆಡ್ಡೆಯನ್ನು ಹೊತ್ತುಕೊಂಡು ಬಳಲುತ್ತಿದ್ದ ಮಹಿಳೆ.
ಅಮಿದಾಬಾನು ಅವರು ಕಳೆದ ಏಳು ವರ್ಷಗಳಿಂದ ಹೊಟ್ಟೆಯಲ್ಲಿ ಗೆಡ್ಡೆ ಇಟ್ಟುಕೊಂಡು ಬದುಕು ನಡೆಸುತ್ತಿದ್ದರಾದರೂ, ಅವರಿಗೆ ಗೆಡ್ಡೆ ಇರುವುದು ತಿಳಿದೇ ಇರಲಿಲ್ಲಘಿ. ಇತ್ತೀಚೆಗೆ ಹೊಟ್ಟೆ ತುಂಬಾ ದೊಡ್ಡದಾಗುತ್ತಿರುವ ಬಗ್ಗೆ ಸಂಬಂಧಿ ವೈದ್ಯರ ಸಲಹೆ ಮೇರೆಗೆ ಮಂಡ್ಯದ ಮಿಮ್ಸ್‌ನಲ್ಲಿ ತಪಾಸಣೆಗೆ ಒಳಗಾದರು.
ಮಿಮ್ಸ್‌ನ ಶಸ ಚಿಕಿತ್ಸಾ ವಿಭಾಗದ ತಜ್ಞ ವೈದ್ಯ ಡಾ. ಲಿಂಗರಾಜು ಮತ್ತು ತಂಡ ಪರೀಕ್ಷೆ ನಡೆಸಿ ಮಹಿಳೆಯ ಹೊಟ್ಟೆಯಲ್ಲಿ ಗೆಡ್ಡೆ ಇರುವುದನ್ನು ಪತ್ತೆ ಹಚ್ಚಿದರು. ಆನಂತರ ಯಶಸ್ವೀ ಶಸ ಚಿಕಿತ್ಸೆ ನಡೆಸುವುದರ ಮೂಲಕ ಹೊಟ್ಟೆಯಲ್ಲಿದ್ದ 18 ಕೆ.ಜಿ. ತೂಕದ ಗೆಡ್ಡೆಯನ್ನು ಹೊರತೆಗೆದಿದ್ದಾರೆ. ಸಧ್ಯ ಮಹಿಳೆ ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದುಘಿ, ಚೇತರಿಸಿಕೊಳ್ಳುತ್ತಿದ್ದಾರೆ.
ಮಿಮ್ಸ್‌ನಲ್ಲಿ ನಡೆದಿರುವ ಶಸ ಚಿಕಿತ್ಸೆ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಡಾ. ಎಂ.ಆರ್. ಹರೀಶ್, ಮಿಮ್ಸ್‌ನ ತಜ್ಞ ವೈದ್ಯರು ಮಹಿಳೆಯ ಹೊಟ್ಟೆಯಲ್ಲಿದ್ದ 18 ಕೆ.ಜಿ. ಗೆಡ್ಡೆಯನ್ನು ಶಸ ಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಹಲವು ವರ್ಷಗಳಿಂದ ಬಳಲುತ್ತಿದ್ದ ಮಹಿಳೆಗೆ ಇದೀಗ ನೆಮ್ಮದಿ ದೊರಕಿದೆ. ಮಿಮ್ಸ್‌ನಲ್ಲಿ ತಜ್ಞ ವೈದ್ಯರು ಹಾಗೂ ಯಶಸ್ವೀ ಶಸ ಚಿಕಿತ್ಸೆ ನಡೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಬಡವರು ಸೇರಿದಂತೆ ಎಲ್ಲ ವರ್ಗದವರೂ ಮಿಮ್ಸ್ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!