ಕೌಟುಂಬಿಕ ಕಲಹ: ಪತ್ನಿ‌, ಆಕೆಯ ತಾಯಿಯನ್ನು ಹತ್ಯೆ ಮಾಡಿದ ಪತಿ

ಹೊಸದಿಗಂತ ವರದಿ ವಿಜಯಪುರ:

ಕೌಟುಂಬಿಕ ಕಲಹಕ್ಕೆ ಪತ್ನಿ‌ ಹಾಗೂ ಪತ್ನಿಯ ತಾಯಿಯನ್ನು ಪತಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ನಗರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಇಲ್ಲಿನ ನವಬಾಗ್‌ದ 32ವರ್ಷದ ರೂಪಾ ಮೇತ್ರಿ ಹಾಗೂ 55 ವರ್ಷದ ಕಲ್ಲವ್ವ ಕೊಲೆಯಾದ ತಾಯಿ ಮಗಳು.

ಆರೋಪಿ ಮಲ್ಲಿಕಾರ್ಜುನ ಮೇತ್ರಿ, ಪತ್ನಿ ರೂಪಾ ತನ್ನ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದಿರುವುದು, ಹಾಗೂ ಮನೆಯಲ್ಲಿ ಕೆಲಸ ಮಾಡದಿರುವುದಕ್ಕೆ ರೋಸಿ ಹೋಗಿದ್ದ‌. ಇದರಿಂದ ಕುಪಿತನಾದ ಮಲ್ಲಿಕಾರ್ಜುನ, ಮಲಗಿದ್ದ ವೇಳೆ ಕಟ್ಟಿಗೆಯಿಂದ ತಲೆಗೆ ಹೊಡೆದು ಪತ್ನಿ ಹಾಗೂ ಅತ್ತೆಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಇಬ್ಬರನ್ನು ಕೊಲೆ ಮಾಡಿದ ಬಳಿಕ ಗಾಂಧಿಚೌಕ್ ಪೊಲೀಸ್ ಠಾಣೆಗೆ ತೆರಳಿ ಆರೋಪಿ ಮಲ್ಲಿಕಾರ್ಜುನ ತಾನಾಗಿಯೇ ಶರಣಾಗಿದ್ದಾನೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!