2ವಿಮಾನಗಳ ಮುಖಾಮುಖಿ ಡಿಕ್ಕಿ: ಇಬ್ಬರು ಪೈಲಟ್‌ಗಳ ದುರಂತ ಅಂತ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕದ ನೆವಾಡಾ ಪ್ರದೇಶದ ರೆನೊದಲ್ಲಿ ಏರ್ ಶೋನಲ್ಲಿ ಎರಡು ವಿಮಾನಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

“ಭಾನುವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 2:15ರ ಸುಮಾರಿಗೆ T-6 ಗೋಲ್ಡ್ ರೇಸ್ ಮುಕ್ತಾಯದ ವೇಳೆ ಲ್ಯಾಂಡಿಂಗ್ ಸಮಯದಲ್ಲಿ ಎರಡು ವಿಮಾನಗಳು ಡಿಕ್ಕಿ ಹೊಡೆದು ಪೈಲೆಟ್‌ ಸಾವನ್ನಪ್ಪಿರುವುದಾಗಿ  ರೆನೊ ಏರ್ ರೇಸಿಂಗ್ ಅಸೋಸಿಯೇಷನ್ ​​ಫೇಸ್‌ಬುಕ್‌ನಲ್ಲಿ ಪೋಸ್ಟ್‌ನಲ್ಲಿ  ತಿಳಿಸಿದೆ.

ಇಬ್ಬರು ಮೃತ ಪೈಲಟ್‌ಗಳನ್ನು ನಿಕ್ ಮ್ಯಾಸಿ ಮತ್ತು ಕ್ರಿಸ್ ರಶಿಂಗ್ ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಉಳಿದ ಶೋಗಳನ್ನು ರದ್ದುಗೊಳಿಸಿರುವುದಾಗಿ ಅಸೋಸಿಯೇಷನ್‌ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!