ಪ್ರಸಿದ್ಧ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ; ಹುಬ್ಬಳ್ಳಿ ಬಸ್‌- ರೈಲು- ವಿಮಾನ ನಿಲ್ದಾಣಗಳಲ್ಲಿ ಹಂತಕರಿಗೆ ತೀವ್ರ ಶೋಧ

ಹೊಸದಿಗಂತ ವರದಿ,  ಹುಬ್ಬಳ್ಳಿ:
ನಗರದ ಉಣಕಲ್ ಕೆರೆ ಹತ್ತಿರದ ಖಾಸಗಿ ಹೋಟೆಲ್ ನಲ್ಲಿ ರಾಜ್ಯದ ಖ್ಯಾತ ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯವರನ್ನು ಇಬ್ಬರು ದುಷ್ಕರ್ಮಿಗಳು ಭಕ್ತರ ಸೋಗಿನಲ್ಲಿ‌ ಬಂದು 50 ಕ್ಕೂ ಹೆಚ್ಚು ಬಾರಿ ಚಾಕೂವಿನಿಂದ ಇರಿದು ಹತ್ಯೆ‌ಮಾಡಿದ್ದಾರೆ. ಈ ವಿಡಿಯೋ ತುಣಕೊಂದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಂತರ ದುಷ್ಕರ್ಮಿಗಳು ಹೋಟೆಲ್ ಮುಂಬಾಗದಿಂದ ಪರಾರಿಯಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಗುರೂಜಿ ಶವ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್’ಗೆ ರವಾನಿಸಲಾಗಿದೆ‌.
ಈ ಹತ್ಯೆ ಪ್ರಕರಣದ ತನಿಖೆಗೆ ಡಿಸಿಪಿ ಸಾಹಿಲ್ ಬಾಗ್ಲಾ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ವಿಶೇಷ ತಂಡ ನಗರದ ರೈಲು ನಿಲ್ದಾ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಕೆಲವು ಪ್ರದೇಶಗಳಲ್ಲಿ ಬ್ಯಾರಿಕೇಡ್ ಹಾಕಿ ಅನುಮಾನಾಸ್ಪದ ವಾಹನ ಸವಾರರನ್ನು‌ ಪರಿಶೀಲನೆ ನಡೆಸುತ್ತಿದ್ದಾರೆ.
ಖ್ಯಾತ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಮೂಲತಃ ಬಾಗಲಕೋಟೆವರಾಗಿದ್ದರು. ವಿದ್ಯಾನಗರದ
ವಾಸ್ತು ಕುರಿತು ಸಲಹೆ, ಸೂಚನೆ ನೀಡಲು ಜುಲೈ 2 ರಂದು ಪ್ರೆಸಿಡೆಂಟ್ ಹೋಟೆಲ್’ನ ಕೊಠಡಿ ನಂ. 220 ರಲ್ಲಿ ವಾಸವಾಗಿದ್ದರು. ಬುಧವಾರ ಕೊಠಡಿ ತೆರವುಗೊಳಿಸುವುದಾಗಿ ಹೇಳಿದ್ದರು. ಹೋಟೆಲ್’ಗೆ ಬಂದಿದ್ದ ದುಷ್ಕರ್ಮಿಗಳು ಗುರೂಜಿಗೆ ದೂರವಾಣಿ ಕರೆ ಮಾಡಿ, ಸ್ವಾಗತಕಾರರ ಕೌಂಟರ್’ನಲ್ಲಿ ಕಾಯುತ್ತಿರುವುದಾಗಿ ತಿಳಿಸಿದ್ದರು’ ಎಂದು ಹೋಟೆಲ್ ಸಿಬ್ಬಂದಿ ಹೇಳಿದರು.
ಸ್ವಾಗತಕಾರರ ಕೌಂಟರ್’ಗೆ ಬಂದ ಗುರೂಜಿ, ದುಷ್ಕರ್ಮಿಗಳ ಬಳಿ ಕೂತು ಕುಷಲೋಪರಿ ವಿಚಾರಿಸಿದ್ದಾರೆ. ಅವರಲ್ಲಿ ಒಬ್ಬ ಗುರೂಜಿ ಕಾಲಿಗೆ ನಮಸ್ಕರಿಸಿದ ಹಾಗೆ ಮಾಡಿದ್ದಾನೆ. ಅದೇ ವೇಳೆ ಮತ್ತೊಬ್ಬ ಚಾಕುವಿನಿಂದ ಇರಿದಿದ್ದಾನೆ. ಹತ್ಯೆ ಕೃತ್ಯ ನಡೆಯುತ್ತಿದ್ದಂತೆ ಸಿಬ್ಬಂದಿ ಭಯದಿಂದ ಹೊರಗೆ ಓಡಿ ಬಂದಿದ್ದಾರೆ. ಈ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!