ಗಂಡಸರೇ… ನಿಮ್ಮ ಎಲುಬಿನ ಆರೋಗ್ಯದ ಬಗ್ಗೆ ಅರಿವಿದೆಯಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮೂಳೆಗಳು ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸುವುದು ಮಹಿಳೆಯರಷ್ಟೇ ಪುರುಷರಿಗೂ ಮುಖ್ಯ. ಮೂಳೆಗಳನ್ನು ಗಟ್ಟಿಯಾಗಿಡಲು ದೇಹಕ್ಕೆ ಕ್ಯಾಲ್ಸಿಯಂ, ವಿಟಮಿನ್ ಡಿ ಇತರ ಪ್ರಮುಖ ಪೋಷಕಾಂಶಗಳು ಮತ್ತು ನಿಯಮಿತವಾದ ತೂಕವನ್ನು ನಿಯಂತ್ರಿಸುವ ದೈಹಿಕ ಚಟುವಟಿಕೆಯ ಅಗತ್ಯವಿರುತ್ತದೆ. ಬಾಲ್ಯದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಅನ್ನು ಪಡೆಯದಿರುವುದು ವಯಸ್ಕರಲ್ಲಿ  ಆಸ್ಟಿಯೊಪೊರೋಸಿಸ್‌ ಎಂಬ ಕಾಯಿಲೆಗೆ ಕಾರಣವಾಗಬಹುದು, ಈ ಕಾಯಿಲೆ ಎದುರಾದರೆ ಮೂಳೆಗಳು ದುರ್ಬಲವಾಗುತ್ತವೆ ಮತ್ತು ಸುಲಭವಾಗಿ ಮುರಿಯುತ್ತವೆ.
ವಯಸ್ಕರಲ್ಲಿ ಸಾಮಾನ್ಯವಾಗಿ 30ನೇ ವಯಸ್ಸಿನ ನಂತರ ಮೂಳೆಗಳ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಸಮಸ್ಯೆ ಎದುರಾದರೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳ ಪೂರೈಕೆಯನ್ನು ಮಾಡುವ ಆಹಾರವನ್ನು ಸೇವಿಸುವಂತೆ ಶಿಫಾರಸು ಮಾಡಲಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಮಲ್ಟಿವಿಟಮಿನ್ ಖನಿಜಾಂಶಗಳನ್ನು ಸೇವಿಸುವಂತೆ ವೈದ್ಯರು ಸೂಚಿಸುತ್ತಾರೆ.

ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಮಾರ್ಗಗಳು:
19 ರಿಂದ 70 ವರ್ಷ ವಯಸ್ಸಿನ ಪುರುಷರು ದಿನಕ್ಕೆ 1,000 ಮಿಲಿಗ್ರಾಂ ಕ್ಯಾಲ್ಸಿಯಂ ಅನ್ನು ಪಡೆಯಬೇಕು. 70 ವರ್ಷ ವಯಸ್ಸಿನ ನಂತರ, ನಿತ್ಯ1,200 ಮಿಲಿಗ್ರಾಂಗಳಷ್ಟು ಕ್ಯಾಲ್ಸಿಯಂ ಸೇವಿಸಬೇಕಾಗುತ್ತದೆ.
ಕ್ಯಾಲ್ಸಿಯಂನ ಉತ್ತಮ ಮೂಲಗಳು ಕಡಿಮೆ- ಕೊಬ್ಬು ಮತ್ತು ಕೊಬ್ಬು-ಮುಕ್ತ ಡೈರಿ ಉತ್ಪನ್ನಗಳಾದ ಹಾಲು, ಮೊಸರು ಮತ್ತು ಚೀಸ್ ಅನ್ನು ಒಳಗೊಂಡಿವೆ. ಸಾರ್ಡೀನ್‌ಗಳು, ಕ್ಯಾಲ್ಸಿಯಂ-ಬಲವರ್ಧಿತ ಪಾನೀಯಗಳಾದ ಸೋಯಾಮಿಲ್ಕ್ ಮತ್ತು ಹಣ್ಣಿನ ರಸಗಳು ಸಹ  ಮೂಳೆಗಳ ಆರೋಗ್ಯುವನ್ನು ಕಾಯ್ದುಕೊಳ್ಳಲು ಅತ್ಯುಪಯುಕ್ತವಾಗಿವೆ. ಸೊಪ್ಪುಗಳು ಹಾಗೂ ಧಾನ್ಯಗಳು ಸಹ ದೇಹಕ್ಕೆ ಅಗತ್ಯ ಪ್ರಮಾಣದ ಕ್ಯಾಲ್ಸಿಯಂ ಒದಗಿಸುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!