ಸಾಗುವಾನಿ ಮರಗಳ ಸಾಗಾಟ ಪ್ರಕರಣ: ವಾಹನ ಸಮೇತ ಆರೋಪಿಯ ಬಂಧನ

ಹೊಸದಿಗಂತ ವರದಿ, ಮುಂಡಗೋಡ:

ತಾಲೂಕಿನ ಹನುಮಾಪುರ ಅರಣ್ಯದಲ್ಲಿ ಎರಡು ಸಾಗುವಾನಿ ಮರಗಳನ್ನು ಕಡಿದು ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ವಾಹನ ಸಮೇತ ಒಬ್ಬ ಆರೋಪಿಯನ್ನು ಬಂಧಿಸಿದ್ದು ಮೂವರು ಆರೋಪಿಗಳು ಪರಾರಿಯಾದ ಘಟನೆ ಜರಗಿದೆ.
ತಾಲೂಕಿನ ಹನುಮಾಪುರ ಗ್ರಾಮದ ಮಂಜುನಾಥ ಪದ್ಮಣ್ಣ ಬಸಾಪುರ (28) ಎಂಬವನೆ ಬಂದಿತ ಆರೋಪಿಯಾಗಿದ್ದು ಬಸಪ್ಪ ರಾಮಣ್ಣ ವಡ್ಡರ, ಮಹೇಶ ಸುಣಗಾರ,ಮಹೇಶ ಮಹಾರಾಜಪೇಟೆ ಎಂಬುವರು ಪರಾರಿಯಾಗಿದ್ದಾರೆ. ಕಳೆದ ವಾರ ತಾಲೂಕಿನ ಹನುಮಾಪುರ ಅರಣ್ಯದಲ್ಲಿ ಬೆಲೆ ಬಾಳುವ ಎರಡು ಸಾಗುವಾನಿ ಮರಗಳನ್ನು ಕಟಾವ್ ಮಾಡಿ ಸಾಗಿಸಲಾಗಿತ್ತು ಈ ಬಗ್ಗೆ ಜೂನ್ 13 ರಂದು ಸವಿಸ್ತಾರವಾಗಿ ಹೊಸದಿಗಂತ ವರದಿಯನ್ನು ಪ್ರಕಟಿಸಿತು ಎಚ್ಚೆತ್ತುಕೊಂಡ ಅತಣ್ಯಾಧಿಕಾರಿಗಳು ಡಿಎಪ್ಓ ಮಾರ್ಗದರ್ಶನದಲ್ಲಿ ತಂಡವನ್ನು ರಚನೆ ಮಾಡಿ ಮರಗಳ್ಳರನ್ನು ಹೆಡಮುರಗಿ ಕಟ್ಟಲು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಅರಣ್ಯ ಇಲಾಖೆಯವರು ಎಪ್ಪತೈದು ಸಾವಿರರೂ ಮೌಲ್ಯದ ಕಟ್ಟಿಗೆ ಸಮೇತ ಒಬ್ಬ ಆರೋಪಿ ಹಾಗೂ ಕಟ್ಟಿಗೆ ಸಾಗಾಟಕ್ಕೆ ಬಳಸಿದ ಟಾಟಾವಿಂಗರ್ ವಾಹನ ಕೆಎ.35ಎಂ.780೮ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಇನ್ನೂ ಮುರು ಆರೋಪಿಗಳು ಪರಾರಿಯಾಗಿದ್ದಾರೆ. ಅವರ ಬಂಧನಕ್ಕೆ ಜಾಲ ಬಿಸಿದ್ದಾರೆ.
ಡಿಎಪ್ಓ ಎಸ್.ಜಿ ಹೆಗಡೆ, ಎಸಿಎಫ್ ಎಸ್.ಎಂ.ವಾಲಿ ಹಾಗೂ ಕಾತೂರ ವಲಯ ಅರಣ್ಯಾಧಿಕಾರಿ ಅಜಯ ನಾಯ್ಕ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ನಾಗರಾಜ ಕಲಾಲ, ಅರಣ್ಯ ರಕ್ಷಕ ಮಲ್ಲನಗೌಡ ಪಾಟೀಲ, ಬಸನಗೌಡ ಬಿರಾದಾರ, ಅರಣ್ಯ ವೀಕ್ಷಕರಾದ ಸಹದೇವ ಪವಾರ, ಶಂಬು ಆರೇಗೋಪ್ಪ. ಇತರರು ದಾಳಿಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!