Friday, June 2, 2023

Latest Posts

ಭಾರತೀಯ ಕಿಸಾನ್ ಸಂಘದ ʼರೈತ ಸಮ್ಮೇಳನ-2022ʼ: ಗೋ ಪೂಜೆ ಮೂಲಕ ಪ್ರಾರಂಭ

ಹೊಸದಿಗಂತ ವರದಿ, ಹುಬ್ಬಳ್ಳಿ:

ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಘಟಕದ ವತಿಯಿಂದ ಆಯೋಜಿಸಲಾಗಿರುವ ಎರಡು ದಿನಗಳ ಉತ್ತರ ಪ್ರಾಂತ ರೈತ ಸಮ್ಮೇಳನ-2022 ಕಾರ್ಯಕ್ರಮವನ್ನು ಗೋ ಪೂಜೆಯೊಂದಿಗೆ ಆರಂಭಿಸಲಾಯಿತು.
ಸೋಮವಾರದಿಂದ ಎರಡು ದಿನಗಳ ಕಾಲ ಗೋಕುಲ ರಸ್ತೆಯ ಹೆಬಸೂರ ಭವನದಲ್ಲಿ ಹಮ್ಮಿಕೊಂಡಿರುವ ಈ ಸಮ್ಮೇಳನವನ್ನು
ಎಂಟನೂರು ದೇಶಿ ಗೋವುಗಳ ಸಂರಕ್ಷರ ಭರಮಣ್ಣ ಗುರಿಕಾರ ಉದ್ಘಾಟಿಸಿದರು. ಗದಗ ಶಿವಾನಂದ ಮಠದ ಶ್ರೀ ಸದಾಶಿವಾನಂದ ಮಹಾಸ್ವಾಮಿಜೀ ಸಾನಿಧ್ಯ ವಹಿಸಿದ್ದರು.
ಅಧ್ಯಕ್ಷತೆಯನ್ನು ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಅಧ್ಯಕ್ಷ ಗುರುನಾಥ ಬಗಲಿ ವಹಿಸಿದ್ದು, ಅತಿಥಿಗಳಾಗಿ ಭಾರತೀಯ ಕಿಸಾನ್ ಸಂಘದ ಅಖಿಲಭಾರತ ಅಧ್ಯಕ್ಷ ಐ.ಎನ್.ಬಸವೇಗೌಡ, ಸಂಘದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ,  ಸಂಘದ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ದೊಣೂರ ರಾಮು , ಪ್ರಮುಖರಾದ ವೀಣಾ ಸತೀಶ, ಗಂಗಾಧರ ಕಾಸರಘಟ್ಟ, ಪರಮೇಶ್ವರಪ್ಪ, ವಿವೇಕಮೋರೆ, ದಕ್ಷಿಣ ಪ್ರಾಂತ ಅಧ್ಯಕ್ಷ  ರಾಜೇಂದ್ರ ರಾಮಾಪುರ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!