September 19, 2026
Saturday, September 19, 2026
spot_img

ಹಾಲಿನ ಖರೀದಿ ದರ ಏರಿಕೆಗೆ ರೈತರ ಒತ್ತಾಯ: ಸಭೆ ಕರೆದು ನಿರ್ಧಾರ ಮಾಡೋಣ ಎಂದ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇವು ಬೆಲೆ ಏರಿಕೆ ಹಾಗೂ ಹಸಿರು ಹುಲ್ಲಿನ ಕೊರತೆಯಿಂದ ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ನೆರವಾಗುವ ನಿಟ್ಟಿನಲ್ಲಿ ಖರೀದಿ ದರ ಹೆಚ್ಚಿಸುವಂತೆ ರೈತರು ಮಾಡಿರುವ ಬೇಡಿಕೆ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನೆರೆಯ ರಾಜ್ಯಗಳಲ್ಲಿ ಹಾಲಿಗೆ ಹೆಚ್ಚಿನ ಖರೀದಿ ದರ ಸಿಗುತ್ತಿರುವ ಹಿನ್ನೆಲೆಯಲ್ಲಿ ಕೆಲ ರೈತರು ಕರ್ನಾಟಕದ ಸಹಕಾರ ಸಂಘಗಳಿಗೆ ಹಾಲು ನೀಡುವ ಬದಲು ನೆರೆಯ ರಾಜ್ಯಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಹಾಲು ಉತ್ಪಾದನೆಯಲ್ಲೂ ಇಳಿಕೆ ಕಂಡುಬಂದಿದೆ ಎಂದು ರೈತರು ತಿಳಿಸಿದ್ದಾರೆ.

ಮೇವು ದರ ಏರಿಕೆ, ಹುಲ್ಲಿನ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿಂದ ಹಾಲು ಉತ್ಪಾದಕರು ತೊಂದರೆ ಅನುಭವಿಸುತ್ತಿದ್ದು, ಖರೀದಿ ದರ ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಡಿಕೆಶಿ ಭರವಸೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !