ಯಾದಗಿರಿ ಜಿಲ್ಲೆಯಲ್ಲಿ ರೈತರ ಎಳ್ಳ ಅಮವಾಸ್ಯೆ ಸಂಭ್ರಮ

ಹೊಸದಿಗಂತ ವರದಿ,ಯಾದಗಿರಿ:

ಜಿಲ್ಲೆಯಲ್ಲಿ ಎಳ್ಳ ಅಮವಾಸ್ಯೆಯನ್ನು ರೈತರು ಸಂಭ್ರಮ ಆಚರಿಸಿದರು.
ಎಳ್ಳ ಅಮವಾಸ್ಯೆ ಹಬ್ಬ ಎಂದರೆ ಬೆಳಗ್ಗೆ ಎತ್ತು ಮತ್ತು ಎತ್ತಿನ ಬಂಡಿಯನ್ನು ಸಿಂಗರಿಸಿ ಅಲಂಕಾರ ಮಾಡಿ ಮನೆಯಲ್ಲಿ ಮಾಡಿದ ಅಡುಗೆ ಸಾಮಗ್ರಿಗಳನ್ನು ಬಂಡಿಯಲ್ಲಿ ಹೇರಿಕೊಂಡು ಹೊಲಗಳಿಗೆ ತೆರಳಿ ಬೆಳೆಯ ಪೂಜೆ ಮಾಡುವ ಮೂಲಕ ಭೂಮಿ ತಾಯಿಗೆ ಸರಗ ಚೆಲ್ಲುವ ಮೂಲಕ ಬೆಳೆ ನೀಡಿದ ಭೂತಾಯಿಗೆ ಊಟ ಮಾಡಿಸುವ ಪದ್ಧತಿ ಯುಗಯುಗಗಳಿಂದ ನಡೆದುಕೊಂಡು ಬಂದಿದೆ. ಈಗಲೂ ಮಣ್ಣಿನ ಮಕ್ಕಳು ಮುಂದುವರೆಸಿಕೊAಡು ಹೋಗುತ್ತಿವುದು ವಿಶೇಷವಾಗಿದೆ.
ಪ್ರಸಕ್ತ ಎಳ್ಳ ಅಮವಾಸ್ಯೆಯಂದು ತಮಗೆ ಅನ್ನ ನೀಡುವ ಭೂಮಿ ತಾಯಿಯನ್ನು ಪೂಜೆ ಮಾಡಿ ತಾವು ಮಾಡಿದ ಅಡುಗೆಯನ್ನು ಅರ್ಪಿಸಿ ಋಣತೀರಿಸಿ ಸಂತಸದೊಳ್ಳುತ್ತಾರೆ. ತಾಲ್ಲೂಕಿನ ಮುದ್ನಾಳ ಗ್ರಾಮದ ಚಂದಮ್ಮ ಹಣಮಂತಪ್ಪ ಇವರ ಹೊಲದಲ್ಲಿ ಎಳ್ಳ ಅಮವಾಸ್ಯೆಯ ಸರಗ ಚೆಲ್ಲುವ ಕಾರ್ಯಕ್ರಮದಲ್ಲಿ ರೈತರು ಸಂಭ್ರಮದಿAದ ಪಾಲ್ಗೊಂಡು ಹಬ್ಬ ಆಚರಿಸಿದರು.
ಬೆಳೆಗಳನ್ನು ಒಂದುಕಡೆ ಜೋಡಿಸಿ ಸೀರೆ ಉಡಿಸಿ ಕಲ್ಲುಗಳಿಂದ ಪಾಂಡವರನ್ನು ನಿರ್ಮಿಸಿ ಪೂಜೆ ಸಲ್ಲಿಸಿದರು. ನಂತರ ಸರಗ ಚೆಲ್ಲಿ ಸಂಭ್ರಮಿಸಿದರು.
ಎಳ್ಳು ಬೆಲ್ಲ, ಹೋಳಿಗೆ ಸೇರಿದಂತೆ ಎಲ್ಲ ದವಸ ಧಾನ್ಯದ ಆಹಾರ ಪದಾರ್ಥವನ್ನು ಸರಗ ಚೆಲ್ಲುವ ಮೂಲಕ ಭೂಮಿ ತಾಯಿಗೆ ಪ್ರಸಾದ ನೀಡಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!