ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್ ಗೆ ಸಿಕ್ಕಿತು ನೂತನ ಸಾರಥಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಗಾಯಗೊಂಡಿರುವ ಕಾರಣ ಇದೀಗ ತಂಡದ ನೂತನ ನಾಯಕನಾಗಿ ಡೇವಿಡ್ ವಾರ್ನರ್‌ಗೆ ಜವಾಬ್ದಾರಿ ವಹಿಸಲಾಗಿದೆ.

ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಡೆಲ್ಲಿ ಫ್ರಾಂಚೈಸ್, ರಿಷಭ್ ಪಂತ್ ಗಾಯಗೊಂಡಿರುವ ಕಾರಣ ವಾರ್ನರ್​ಗೆ ತಂಡದ ನಾಯಕತ್ವ ನೀಡಿರುವುದಾಗಿ ಹೇಳಿಕೊಂಡಿದೆ. ಹಾಗೆಯೇ ವಾರ್ನರ್ ಜೊತೆಗೆ ಅಕ್ಷರ್ ಪಟೇಲ್​ಗೆ ತಂಡದ ಉಪನಾಯಕತ್ವವಹಿಸಿಕೊಡಲಾಗಿದೆ.

ವಾಸ್ತವವಾಗಿ ಕಳೆದ ಡಿಸೆಂಬರ್​ 30 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿರುವ ಡೆಲ್ಲಿ ತಂಡದ ನಾಯಕ ಪಂತ್ ಇಡೀ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಹಾಗಾಗಿ ವಾರ್ನರ್ ತಂಡವನ್ನು ಮುನ್ನಡೆಸಲಿದ್ದಾರೆ.

2021ರ ಐಪಿಎಲ್ ಬಳಿಕ ಸನ್‌ರೈಸರ್ಸ್ ಹೈದರಾಬಾದ್‌ ಫ್ರಾಂಚೈಸ್, ಡೇವಿಡ್ ವಾರ್ನರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ವಾರ್ನರ್ ಈ ಹಿಂದೆ ಹೈದರಾಬಾದ್‌ ತಂಡದ ನಾಯಕರಾಗಿದ್ದರು. ವಾರ್ನರ್ ನಾಯಕತ್ವದಲ್ಲಿ ಸನ್‌ರೈಸರ್ಸ್ ತಂಡ 2016 ರಲ್ಲಿ ಚಾಂಪಿಯನ್ ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!