Saturday, March 25, 2023

Latest Posts

ಕಳೆದ‌ 120 ವರ್ಷಗಳಲ್ಲೇ ಗರಿಷ್ಠ ಉಷ್ಣಾಂಶದ ದಾಖಲೆ ಬರೆಯಿತು ಈ ಫೆಬ್ರ’ವರಿ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವರಾತ್ರಿ ಕಳೆದಿದ್ದೇ ತಡ, ತಡೆದುಕೊಳ್ಳೋಕೆ ಆಗದಷ್ಟು ಶೆಖೆ, ಉರಿ ಬಿಸಲು…
ದೇಶದಲ್ಲಿ ಕಳೆದ 120 ವರ್ಷಗಳಲ್ಲಿಯೇ ಫೆಬ್ರವರಿಯಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಫೆಬ್ರವರಿಯಲ್ಲಿ ಸಾಮಾನ್ಯವಾಗಿ ಕನಿಷ್ಠ ತಾಪಮಾನ 16.31 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಆದರೆ ಈ ಬಾರಿ 29.54 ಡಿಗ್ರಿ ತಾಪಮಾನವೇ ಕನಿಷ್ಠವಾದ್ದು.

1901ರ ನಂತರ ದಾಖಲಾದ ಗರಿಷ್ಠ ತಾಪಮಾನ ಇದಾಗಿದೆ. ಇದೀಗ ಮಾರ್ಚ್‌ನಲ್ಲಿಯೂ ದೇಶದ ಬಹುತೇಕ ಭಾಗಗಳಲ್ಲಿ ತಿಂಗಳ ಗರಿಷ್ಠ ತಾಪಮಾನ ಸರಾಸರಿಗಿಂತ ಹೆಚ್ಚಿರುವ ಸಾಧ್ಯತೆ ಇದೆ.

ದೇಶದಲ್ಲಿ ತಾಪಮಾನ ಹೆಚ್ಚಾಗುವ ಕಾರಣ ಬಿಸಿಲ ಝಳದಿಂದ ಕಾಣಿಸಿಕೊಳ್ಳುವ ಕಾಯಿಲೆಗಳ ಮೇಲೆ ಕಣ್ಗಾವಲು ಇರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!