October 15, 2026
Thursday, October 15, 2026
spot_img

ಬನ್ನೇರುಘಟ್ಟದಲ್ಲಿ ಅನಾರೋಗ್ಯದಿಂದಾಗಿ ಹೆಣ್ಣು ಜಿರಾಫೆ ಶಿವಾನಿ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅನಾರೋಗ್ಯದಿಂದಾಗಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೆಣ್ಣು ಜಿರಾಫೆಯೊಂದು ಮೃತಪಟ್ಟಿದೆ.

ಮೂರು ವರ್ಷದ ಜಿರಾಫೆ ಶಿವಾನಿ ಅನಾರೋಗ್ಯದಿಂದಾಗಿ ಮೃತಪಟ್ಟಿದೆ. ಕೆಲವು ದಿನಗಳಿಂದ ಶಿವಾನಿ ಆಹಾರವನ್ನೂ ಸೇವಿಸುತ್ತಿರಲಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.

ಶಿವಾನಿ ಜಿರಾಫೆ ಕಳೆದ ಕೆಲ ದಿನಗಳಿಂದ ಆಕ್ಟೀವ್‌ ಆಗಿರ ಇರಲಿಲ್ಲ. ಅದಕ್ಕೆ ಕರುಳಿಗೆ ಸಂಬಂಧಿಸಿದ ಸಮಸ್ಯೆ ಆಗಿತ್ತು. ಅಂತಿಮವಾಗಿ ಕರುಳು ಸುತ್ತಿಕೊಂಡು ರಕ್ತಪರಿಚಲನೆ ಆಗದೇ ಜಿರಾಫೆ ಮೃತಪಟ್ಟಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜನರು ಪ್ರಮುಖವಾಗಿ ಈ ಶಿವಾನಿ ಜಿರಾಫೆಯನ್ನು ನೋಡಿ ಖುಷಿ ಪಡುತ್ತಿದ್ದರೂ. ವೈದ್ಯರು ಸತತ ಚಿಕಿತ್ಸೆ ನೀಡಿದರೂ ಶಿವಾನಿ ಆರೋಗ್ಯ ಸುಧಾರಿಸಿಲಿಲ್ಲ.

ಜಿರಾಫೆಯನ್ನು ನೋಡಿಕೊಳ್ಳುತ್ತಿದ್ದ ಸಿಬ್ಬಂದಿ, ಪ್ರಾಣಿಪ್ರಿಯರು ಶಿವಾನಿ ಸಾವಿಗೆ ಕಂಬನಿ ಮಿಡಿದಿದ್ದಾರೆ. ಶಿವಾನಿ ಪೋಸ್ಟ್‌ಮಾರ್ಟಂ ವರದಿಯಲ್ಲಿ ಸಿಕಲ್‌ ಟಾರ್ನ್‌ ಎಂಬ ಸಮಸ್ಯೆಯಿಂದ ಮೃತಪಟ್ಟಿದೆ ಎಂದು ಹೇಳಲಾಗಿದೆ.

Must Read