ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಬದ್ಧ ವೈರಿಗಳಾದ ಇರಾನ್-ಸೌದಿ ಒಪ್ಪಿಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಬದ್ಧ ವೈರಿಗಳಾದ ಇರಾನ್-ಸೌದಿ ಒಪ್ಪಿಗೆ ಸೂಚಿಸಿದೆ. ಚೀನಾ ನೆರವು ಹಾಗೂ ಮಧ್ಯಸ್ಥಿಕೆಯಿಂದ ದ್ವಿಪಕ್ಷೀಯ ಸಂಬಂಧ ಮರುಸ್ಥಾಪನೆಯಾಗುತ್ತಿದೆ. ಬರೋಬ್ಬರಿ ಏಳು ವರ್ಷಗಳ ನಂತರ ರಾಯಭಾರ ಕಚೇರಿಗಳನ್ನು ಮತ್ತೆ ತೆರೆಯಲಾಗುತ್ತಿದೆ.

ಚೀನಾ ಮಧ್ಯಸ್ಥಿಕೆಯಿಂದ ಉಭಯ ದೇಶಗಳ ನಡುವಿನ ಶಸ್ತ್ರಾಸ್ತ್ರ ಸಂಘರ್ಷದ ಸಾಧ್ಯತೆ ಕಡಿಮೆಯಾಗುತ್ತದೆ. ಇದು ನೇರವಾಗಿ ಅಥವಾ ಪರೋಕ್ಷವಾಗಿಯೂ ಇರಬಹುದು.

ಗಲ್ಫ್ ಅರಬ್ ರಾಷ್ಟ್ರಗಳು ಅಮೆರಿಕಾ ಮಧ್ಯಪ್ರಾಚ್ಯದಿಂದ ನಿಧಾನವಾಗಿ ಹಿಂದೆ ಸರಿಯುತ್ತಿವೆ, ಹೀಗಾಗಿ ಚೀನಾದಲ್ಲಿ ಔಪಚಾರಿಕ ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ ನಡುವೆ ಇರಾನ್ ಹಾಗೂ ಸೌದಿ ಸಂಬಂಧ ಸುಧಾರಣೆಗೆ ಚೀನಾ ವೇದಿಕೆ ಕಲ್ಪಿಸಿ, ರಾಜತಾಂತ್ರಿಕ ಗೆಲುವು ಎನ್ನುವ ದೃಷ್ಟಿಯಿಂದ ನೋಡುತ್ತಿದೆ.

ಇದರ ಜತೆಗೆ ಯಮನ್‌ನಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸಲು ರಾಜತಾಂತ್ರಿಕರು ಯತ್ನಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!