ಹೊಸದಿಗಂತ ಡಿಜಿಟಲ್ ಡೆಸ್ಕ್:
ಕತಾರ್ ನಲ್ಲಿ ಫಿಫಾ ಫುಟ್ಬಾಲ್ ಸಂಭ್ರಮ ನಡೆಯುತ್ತಿದ್ದು, ಇಂದು ಇಂಗ್ಲೆಂಡ್ ವಿರುದ್ಧ ನಡೆದ ವಿಶ್ವಕಪ್’ನ ಆರಂಭಿಕ ಪಂದ್ಯಕ್ಕೂ ಮುನ್ನ ಇರಾನ್ ಆಟಗಾರರು ತಮ್ಮ ರಾಷ್ಟ್ರಗೀತೆಯನ್ನ ಹಾಡಲು ನಿರಾಕರಿಸಿದ್ದಾರೆ.
ಇರಾನ್‍ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನಾಕಾರರನ್ನು ಬೆಂಬಲಿಸಿ ರಾಷ್ಟ್ರಗೀತೆಯನ್ನ ಹಾಡಲು ನಿರಾಕರಿಸಬೇಕೇ ಅಥವಾ ಬೇಡವೇ ಎಂಬುದನ್ನ ತಂಡವು ಸಾಮೂಹಿಕವಾಗಿ ನಿರ್ಧರಿಸುತ್ತದೆ ಎಂದು ತಂಡದ ನಾಯಕಿ ಅಲಿರೆಜಾ ಜಹಾನ್ಬಕ್ಷ್ ಹೇಳಿದ್ದಾರೆ.
ಇದಕ್ಕೂ ಮುನ್ನದುಬೈನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧದ ಪಂದ್ಯದ ಆರಂಭದಲ್ಲಿ ರಾಷ್ಟ್ರೀಯ ಬೀಚ್ ಫುಟ್ಬಾಲ್ ತಂಡವು ರಾಷ್ಟ್ರಗೀತೆಯನ್ನು ಹಾಡಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.