Saturday, March 25, 2023

Latest Posts

ನೆಪೋ ಮಾಫಿಯಾ ಇನ್ನೂ ಜೀವಂತ: ಫಾಲ್ಕೆ ಪ್ರಶಸ್ತಿಯಲ್ಲಿನ ಕೆಲವು ಹೆಸರುಗಳಿಗೆ ಕಂಗನಾ ಕಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಾದಾಸಾಹೇಬ್ ಫಾಲ್ಕೆ (DadaSahebPhalke) ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟಿ ಮತ್ತು ನಟ ಪ್ರಶಸ್ತಿಗಳನ್ನು ಗೆದ್ದಿರುವ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ ಅವರ ವಿರುದ್ಧ ನಟಿ ಕಂಗನಾ ಕಿಡಿ ಕಾರಿದ್ದಾರೆ.

ತಮ್ಮ ಟ್ವಿಟರ್​ನಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಟಿ, ಅರ್ಹ ಪ್ರತಿಭೆಗಳಿಂದ ಎಲ್ಲಾ ಪ್ರಶಸ್ತಿಗಳನ್ನು ಕಸಿದುಕೊಳ್ಳಲಾಗಿದೆ. ಇದರಿಂದ ನೆಪೋ ಮಾಫಿಯಾ ಇನ್ನೂ ಜೀವಂತವಾಗಿದೆ ಎಂದು ತಿಳಿಯುತ್ತಿದೆ. ಪ್ರಶಸ್ತಿಗಳ ಸೀಸನ್ ಬರುತ್ತಲೇ ನೆಪೋಟಿಸಂ ಮಾಫಿಯಾ ಮತ್ತೆ ಶುರುವಾಗಿದೆ. ಅರ್ಹ ಪ್ರತಿಭೆಗಳಿಂದ ಎಲ್ಲಾ ಪ್ರಶಸ್ತಿಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಬರೆದಿದ್ದಾರೆ.

ಆದರೆ ರಿಷಬ್​ ಶೆಟ್ಟಿ, ಅನುಪಮ್​ ಖೇರ್​, ಆರ್​ಆರ್​ಆರ್​ ಚಿತ್ರಗಳಿಗೆ ಪ್ರಶಸ್ತಿ ಬಂದಿರುವುದು ನಿಜವಾದ ಪ್ರಶಸ್ತಿ ಎಂದು ಅವರು ಶ್ಲಾಘಿಸಿದ್ದಾರೆ.

ನೆಪೋ ಮಕ್ಕಳು ಕೆಲಸ ಪಡೆಯಲು ಕರಣ್ ಜೋಹರ್ ಅವರನ್ನು ಹೊಗಳುತ್ತಾರೆ. ಅಷ್ಟೇ ಅಲ್ಲದೆ ಪ್ರತಿಭೆಯುಳ್ಳ ವ್ಯಕ್ತಿಯ ವೃತ್ತಿ ಜೀವನವನ್ನು ಹಾಳು ಮಾಡುತ್ತಾರೆ. ಆದರೆ ಯಾರಾದರೂ ತಮಗಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ್ರೆ ಅವರಿಗೆ ಸಮಸ್ಯೆ ತಪ್ಪಿದ್ದಲ್ಲ. ನಾನು ನೆಪೋಟಿಸಂ ಮಾಡುವವರನ್ನು ನಾಶ ಮಾಡ್ತೀನಿ. ಸುತ್ತಲೂ ದುಷ್ಟರು ಇರುವಾಗ ಒಬ್ಬರು ಜೀವನದ ಸೌಂದರ್ಯ ಸವಿಯಲು ಸಾಧ್ಯವಿಲ್ಲ. ದುಷ್ಟರ ಸಂಹಾರವೇ ಧರ್ಮದ ಗುರಿ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ ಎಂದೂ ಕಂಗನಾ ಹೇಳಿದ್ದಾರೆ.

ಕಂಗನಾ ರಣಾವತ್ ಈ ಮಾತಿನಿಂದ ಕೆಲವರು ಈಕೆಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ನೀವು ಅಸೂಯೆಗಳ ರಾಣಿ ಎಂದು ಕರೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!