ಕ್ಸಿಯೋಮಿಗೆ ಆರ್ಥಿಕ ಸಂಕಷ್ಟ: 900 ಉದ್ಯೋಗ ಕಡಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಚೀನಾ ಮೂಲದ ಪ್ರಸಿದ್ಧ ಮೊಬೈಲ್‌ ಕಂಪನಿ ಕ್ಸಿಯೋಮಿ ಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ 900 ಉದ್ಯೋಗಗಳನ್ನು ಕಂಪನಿಯು ಕಡಿತಗೊಳಿಸಿದೆ. ವರದಿಗಳ ಪ್ರಕಾರ ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯ ಜಾಗತಿಕ ಆದಾಯದಲ್ಲಿ 20% ಕುಸಿತವನ್ನು ಕಂಡಿದೆ. ಈ ಹಿನ್ನೆಲಯಲ್ಲಿ ಉದ್ಯೋಗ ಕಡಿತಕ್ಕೆ ಕಂಪನಿ ಮುಂದಾಗಿದೆ.

ಕೋವಿಡ್‌ ನಿರ್ಭಂಧಗಳಿಂದ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಯು ಕುಸಿದಿದ್ದು ಕ್ಸಿಯೋಮಿಯು ಹೆಚ್ಚು ನಷ್ಟ ಅನುಭವಿಸಿದೆ. ಭಾರತದಲ್ಲಿ ಕ್ಷಿಯೋಮಿ ಬೇಡಿಕೆ ಕುಸಿದಿದ್ದು ಪ್ರಸ್ತುತ ಚೀನಾದಲ್ಲೂ ಕ್ಷಿಯೋಮಿಯ ಬೇಡಿಕೆ ಕುಸಿದಿರುವುದು ಕಂಪನಿ ನಷ್ಟಕ್ಕೆ ಸಿಲುಕಲು ಕಾರಣವಾಗಿದೆ. ಇದು ಕಂಪನಿಯ ಶೇ.3 ರಷ್ಟು ಉದ್ಯೋಗಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಪ್ರಸ್ತುತ 32,869 ಖಾಯಂ ಉದ್ಯೋಗಿಗಳನ್ನು ಹೊಂದಿದ್ದು ಅವರಲ್ಲಿ 30,110 ಜನರು ಚೀನಾದ ಬೀಜಿಂಗ್‌ನಲ್ಲಿರುವ ಪ್ರಧಾನ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನುಳಿದವರು ಭಾರತ ಮತ್ತು ಇಂಡೋನೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಉದ್ಯೋಗ ಕಡಿತವು ಕ್ಸಿಯೋಮಿ ಇಂಡಿಯಾದ ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

” ಈ ತ್ರೈಮಾಸಿಕದಲ್ಲಿ, ಹೆಚ್ಚುತ್ತಿರುವ ಜಾಗತಿಕ ಹಣದುಬ್ಬರ, ವಿದೇಶಿ ವಿನಿಮಯ ಏರಿಳಿತಗಳು (ಮತ್ತು) ಸಂಕೀರ್ಣ ರಾಜಕೀಯ ವಾತಾವರಣ ಸೇರಿದಂತೆ ನಮ್ಮ ಉದ್ಯಮವು ಅನೇಕ ಸವಾಲುಗಳನ್ನು ಎದುರಿಸಿದೆ. ಈ ಸವಾಲುಗಳು ಒಟ್ಟಾರೆ ಮಾರುಕಟ್ಟೆ ಬೇಡಿಕೆ ಮತ್ತು ನಮ್ಮ ಹಣಕಾಸಿನ ಫಲಿತಾಂಶಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ ” ಎಂದು Xiaomi ಅಧ್ಯಕ್ಷ ವಾಂಗ್ ಕ್ಸಿಯಾಂಗ್ ಹೇಳಿದ್ದಾರೆ.

ಕ್ಸಿಯೋಮಿ ಕಂಪನಿಯ ಒಟ್ಟೂ ಆದಾಯದಲ್ಲಿ ಅರ್ಧಕ್ಕಿಂತ ಹೆಚ್ಚಿನದು ಸ್ಮಾರ್ಟ್‌ ಫೋನ್‌ ಮಾರಾಟದಿಂದಲೇ ಬರುತ್ತದೆ. ಆದರೆ ಪ್ರಸ್ತುತ ಈ ಆದಾಯವು 29%ದಷ್ಟು ಕುಸಿದಿದೆ. ಸ್ಮಾರ್ಟ್‌ಫೋನ್ ಮಾರಾಟವು ವರ್ಷದಿಂದ ವರ್ಷಕ್ಕೆ 20% ದಷ್ಟು ಅಂದರೆ 70.17 ಶತಕೋಟಿ ಯುವಾನ್‌ ನಷ್ಟು ಕುಸಿದಿದೆ. ನಿವ್ವಳ ಆದಾಯವು 67% ರಷ್ಟು ಕುಸಿದು 2.08 ಶತಕೋಟಿ ಯುವಾನ್‌ಗೆ ತಲುಪಿದೆ ಎಂಬುದನ್ನು ವಿಶ್ಲೇಷಣೆಗಳು ತಿಳಿಸಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!