ಹೊಸದಿಗಂತ ವರದಿ,ಸಕಲೇಶಪುರ:
ತಾಲ್ಲೂಕಿನ ಹಾದಿಗೆ ಗ್ರಾಮದ ಕಾರ್ಮಿಕ ಸಾಕಿದ್ದ ೧೫ ಕ್ಕೂ ಹೆಚ್ಚು ನಾಟಿ ಕೋಳಿಗಳಿಗೆ ಕಿಡಿಗೇಡಿಗಳು ವಿಷವಿಟ್ಟು ಕೊಂದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಸತ್ತು ಬಿದ್ದಿದ್ದ ಕೋಳಿಯೊಂದರ ಬಾಯಿಂದ ಬೆಂಕಿ ಹೋರ ಬಂದು ಅಚ್ಚರಿ ಮೂಡಿಸಿದೆ.
ಗ್ರಾಮದ ರವಿ ಹಾಗೂ ಇತರರು ಕುಟುಂಬ ನಿರ್ವಹಣೆಗೆ ನೆರವಾಗಲೆಂದು ಕೋಳಿಗಳನ್ನು ಸಾಕಿದ್ದರು. ಎಂದಿನoತೆ ಕೂಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕರು ಸಂಜೆ ಮನೆಗೆ ಬಂದಯ ನೋಡಿದಾಗ ಕೋಳಿಗಳು ಸಾಮೂಹಿಕವಾಗಿ ಸತ್ತು ಬಿದ್ದಿದ್ದವು. ಈ ದುಷ್ಕೃತ್ಯ ಎಸಗಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಕೂಲಿ ಕಾರ್ಮಿಕರು ಆಗ್ರಹಿಸಿದ್ದಾರೆ.
ಅಚ್ಚರಿ ಎನ್ನುವಂತೆ ಸತ್ತ ಬಿದ್ದಿರುವ ಕೋಳಿಯೊಂದರ ಬಾಯಲ್ಲಿ ಬೆಂಕಿ ಹಾಗೂ ಹೊಗೆ ಹೊರ ಬಂದಿದ್ದು, ಸುತ್ತಮುತ್ತಲ ಜನ ತಂಡೋಪತoಡವಾಗಿ ಬಂದು ನೋಡಿಕೊಂಡು ಹೋದರು. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.