ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಆನೇಕಲ್ ತಾಲೂಕಿನ ಬಸವನಪುರ ಗೇಟ್ನಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ನಲ್ಲಿ (BMTC bus) ಆಕಸ್ಮಿಕ ಬೆಂಕಿ (fire) ಕಾಣಿಸಿಕೊಂಡಿರುವಂತಹ ಘಟನೆ ನಡೆದಿದೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಳಗಿಳಿದು ಪ್ರಯಾಣಿಕರು ಪಾರಾಗಿದ್ದಾರೆ. ತಾಂತ್ರಿಕದೋಷದಿಂದ ಬೆಂಕಿ ಹೊತ್ತಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಕೆಎ 57, ಎಫ್ 0569 ಸಂಖ್ಯೆ ಬಿಎಂಟಿಸಿ ಬಸ್ ಬೆಂಕಿಗಾಹುತಿ ಆಗಿದ್ದು, ಮೆಜೆಸ್ಟಿಕ್-ಜಿಗಣಿ ನಡುವೆ ಸಂಚರಿಸುತ್ತಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.