ಅಕ್ರಮವಾಗಿ ಕಡವೆ ಬೇಟೆ: ಇಬ್ಬರ ಬಂಧನ

ಹೊಸದಿಗಂತ ವರದಿ ಮಡಿಕೇರಿ:

ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿ ಮಾಂಸವನ್ನಾಗಿ ಪರಿವರ್ತಿಸುವ ಸಂದರ್ಭ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ದಬ್ಬಡ್ಕ ಗ್ರಾಮದ ನಿವಾಸಿಗಳಾದ ಕೃಷ್ಣಪ್ಪ ಮತ್ತು ಕೆ.ಎಸ್. ಪುರುಷೋತ್ತಮ ಎಂದು ಗುರುತಿಸಲಾಗಿದೆ.

ಇವರಿಬ್ಬರೂ ಸಂಪಾಜೆ ವಲಯದ ದಬ್ಬಡ್ಕ ಮೀಸಲು ಅರಣ್ಯದಲ್ಲಿ ಕಡವೆಯನ್ನು ಬೇಟೆಯಾಡಿ ಮಾಂಸ ಮಾಡುತ್ತಿದ್ದ ಸಂದರ್ಭ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಾಧಿಕಾರಿ ಎ.ಟಿ.ಪೂವಯ್ಯ ಹಾಗೂ ಸಂಪಾಜೆ ವಲಯ ಅರಣ್ಯ ಅಧಿಕಾರಿ ಎಂ.ಕೆ.ಮಧುಸೂದನ್ ಅವರ ನೇತೃತ್ವದಲ್ಲಿ ಶಾಖೆಯ ಉಪ ಅರಣ್ಯ ಅಧಿಕಾರಿ ನಿಸಾರ್ ಅಹಮದ್, ಅರಣ್ಯ ರಕ್ಷಕ ಕಾರ್ತಿಕ್, ಅರಣ್ಯ ವೀಕ್ಷಕರಾದ ಕೂಸಪ್ಪ ಮತ್ತು ಮನೋಜ್ ಕುಮಾರ್ ಅವರ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅವರಿಂದ ಅಂದಾಜು ನೂರು ಕೆಜಿ ಕಡವೆ ಮಾಂಸ, ಬೇಟೆಯಾಡಲು ಉಪಯೋಗಿಸಿದ ಕತ್ತಿ ಮಚ್ಚು, ಹಗ್ಗ, ಬಕೆಟ್’ಗಳನ್ನು ವಶಪಡಿಸಿಕೊಂಡಿರುವುದಾಗಿ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!