ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮುವಿನ ಮಕ್ವಾಲ್ ಪ್ರದೇಶದ ಗಡಿ ಭದ್ರತಾ ಪಡೆ ಪೋಸ್ಟ್ಗಳ ಮೇಲೆ ಪಾಕಿಸ್ತಾನ ರೇಂಜರ್ ಗಳು ಗುಂಡಿನ ದಾಳಿ ನಡೆಸಿದ್ದಾರೆ.
ಸದ್ಯ ಗಡಿಯಲ್ಲಿ ಗುಂಡಿನ ಚಕಮಕಿ ಮುಂದುವರೆದಿದ್ದು, ಬಿಎಸ್ಎಫ್ ಕೂಡ ಪರಿಣಾಮಕಾರಿ ಪ್ರತೀಕಾರದೊಂದಿಗೆ ಪ್ರತಿಕ್ರಿಯಿಸಿದೆ.
ಬಿಎಸ್ಎಫ್ ಬಿಒಪಿ (ಬಾರ್ಡರ್ ಔಟ್ಪೋಸ್ಟ್) ಅನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಪಡೆಗಳು ತಮ್ಮ ಭೂಪ್ರದೇಶದಿಂದ ಗಡಿಯಾಚೆಗಿನ ಗುಂಡಿನ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಪಾಕಿಸ್ತಾನದ 13 ಚೆನಾಬ್ ರೇಂಜರ್ ಗಳು ಭಾಗಿಯಾಗಿದ್ದಾರೆ.