April 13, 2026
Monday, April 13, 2026
spot_img

ಮೊದಲು ಭೂಪಟದಲ್ಲಿ ನೀವೇ ಇಲ್ಲವಾಗದಂತೆ ಎಚ್ಚರವಹಿಸಿ: ಟ್ರಂಪ್ ಗೆ ಇರಾನ್ ಖಡಕ್ ಕೌಂಟರ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇರಾನ್ – ಇಸ್ರೇಲ್ – ಅಮೆರಿಕ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಹರಿವಿಗೆ ಅಡ್ಡಿಪಡಿಸಬೇಡಿ ಎಂದ ಡೊನಾಲ್ಡ್ ಟ್ರಂಪ್ ಗೆ ಕೌಂಟರ್ ಕೊಟ್ಟಿದ್ದ ಇರಾನ್, ಇದೀಗ ಮತ್ತೊಂದು ವಾರ್ನಿಂಗ್ ಅನ್ನು ನೀಡಿದೆ.

ಅಮೆರಿಕಾದ ಅಧ್ಯಕ್ಷರ ಬೆದರಿಕೆಗೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದ ಇರಾನ್’ನ ಹಿರಿಯ ಅಧಿಕಾರಿ, ಮೊದಲು ಭೂಪಟದಲ್ಲಿ ನೀವೇ ಇಲ್ಲವಾಗದಂತೆ ಎಚ್ಚರವಹಿಸಿ ಎನ್ನುವ ವಾರ್ನಿಂಗ್’ಅನ್ನು ನೀಡಿದ್ದಾರೆ.

ಇರಾನ್ ಅಧಿಕಾರಿ ಅಲಿ ಲಾರಿಜಾನಿ ಸಾಮಾಜಿಕ ಜಾಲತಾಣದಲ್ಲಿ ವಾರ್ನಿಂಗ್ ನೀಡಿದ್ದಾರೆ. “ನಿಮ್ಮ ಖಾಲಿ ಬೆದರಿಕೆಗೆ ಇರಾನ್ ಜಗ್ಗುವುದಿಲ್ಲ. ನಿಮಗಿಂದ ದೊಡ್ಡವರಿಗೇ ಇರಾನ್ ಅನ್ನು ಅಳಿಸಲು ಸಾಧ್ಯವಾಗಿಲ್ಲ. ಮೊದಲು ನೀವೇ ಇಲ್ಲವಾಗದಂತೆ ಎಚ್ಚರಿಕೆ ವಹಿಸಿಕೊಳ್ಳಿ ಎಂದು ಟ್ರಂಪ್ ಗೆ ಎಚ್ಚರಿಕೆ ನೀಡಿದ್ದಾರೆ.

ಹಾರ್ಮುಜ್ ಜಲಸಂಧಿಯ ಮಹತ್ವದ ಬಗ್ಗೆ ನಮಗೆ ಅರಿವಿದೆ. ಈ ಜಲಮಾರ್ಗವು ಎಲ್ಲರಿಗೂ ಶಾಂತಿ ಮತ್ತು ಸಮೃದ್ದಿಯ ಹಾದಿಯಾಗಬೇಕು. ಯುದ್ದವನ್ನು ಕಾಲೆಳೆದುಕೊಂಡು ಬರುವವರಿರೆ ನೋವು ಮತ್ತು ಸೋಲಿನ ದಾರಿಯಾಗಲಿದೆ ಎಂದು ಖಡಕ್ ಆಗಿ ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !