ಪ್ರಥಮ ಸಂಜೀವಿನಿ ಜೀವ ರಕ್ಷಕ ಪ್ರಶಸ್ತಿ ಕಿಚ್ಚ ಸುದೀಪ್ ಮುಡಿಗೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ರಾಜ್ಯದಂತ ಸಂಜೀವಿನಿ ಜೀವ ರಕ್ಷಕ ಪ್ರಶಸ್ತಿಯನ್ನು ಚಿತ್ರನಟ ಕಿಚ್ಚ ಸುದೀಪ್ ಅವರಿಗೆ ನೀಡುತ್ತಾರೆಂಬುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಇದನ್ನು ಸ್ವತಃ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‌ನ ರಾಜ್ಯಾಧ್ಯಕ್ಷ ರಂಗಸ್ವಾಮಿ ಪ್ರಶಸ್ತಿ ನೀಡುವುದರ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಪ್ರಥಮ ಬಾರಿಗೆ ಸಂಜೀವಿನಿ ಜೀವ ರಕ್ಷಕ ಪ್ರಶಸ್ತಿಯು ಶ್ರೀಯುತ ಕಿಚ್ಚ ಸುದೀಪ್ ಅವರಿಗೆ ನೀಡಬೇಕೆಂಬುದು ಸಂಜೀವಿನಿ ರಾಜ್ಯ ಸಮಿತಿ ಸಮಿತಿಯ ನಿರ್ಧಾರವಾಗಿದ್ದು, ಪ್ರಶಸ್ತಿಗೆ ಆಯ್ಕೆ ಮಾಡಿರುವುದಂತೂ ನಿಜ. ಆದರೆ ನಾವು ಸಂಪೂರ್ಣವಾಗಿ ಸುದೀಪ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಅವಕಾಶ ಕೇಳಿದ್ದೇವೆ. ಅಭಿಮಾನಿ ವೇದಿಕೆಯ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದಿದ್ದಾರೆ.
ಸುದೀಪ್ ಅವರು ಹೈದರ್‌ಬಾದ್‌ನಲ್ಲಿ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷ್‌ನಲ್ಲಿ ಬಿಸಿಯಾಗಿದ್ದರಿಂದ ಅವರ ಭೇಟಿಗೆ ಕಾಲಾವಕಾಶ ಸಿಕ್ಕಿಲ್ಲ. ಸುದೀಪ್ ಅವರ ಡೇಟ್ ಕಾರ್ಯಕ್ರಮಕ್ಕೆ ಸಿಕ್ಕ ನಂತರ ನಾವು ಸುದ್ದಿಗೋಷ್ಠಿ ಮಾಡಬೇಕಿತ್ತು. ಅಷ್ಟರಲ್ಲಿ ಆಗಲೇ ಪ್ರಶಸ್ತಿ ಪೋಸ್ಟರ್ ರಾಜ್ಯಾದ್ಯಂತ ವೈರಲ್ ಆಗಿದೆ. ಹಾಗಾಗಿ ಅನಿರೀಕ್ಷಿತವಾಗಿ ಸುದ್ದಿ ಎಲ್ಲೆಡೆ ಪ್ರಚಾರವಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿರ್ದೇಶನದಂತೆ ನಮ್ಮ ಟ್ರಸ್ಟ್‌ನ ಪದಾಧಿಕಾರಿಗಳು ಜಿಲ್ಲಾ ಅಭಿಮಾನಿ ವೇದಿಕೆಯ ಅಧ್ಯಕ್ಷರು ಮತ್ತು ಗಣ್ಯರುಗಳ ಜೊತೆಗೆ ಕಾರ್ಯಕ್ರಮಗಳ ರೂಪುರೇಷಗಳ ಬಗ್ಗೆ ಚರ್ಚಿಸಿ ಜಿಲ್ಲೆಯ ಎಲ್ಲಾ ಮಠಾಧೀಶರುಗಳ ಆರ್ಶೀವಾದ ಪಡೆದು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಶಸ್ತಿ ಸಮಾರಂಭವು ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ನಲ್ಲಿ ನಡೆಸಲಾಗುವುದು ಎಂದರು.
ಜೀವ ರಕ್ಷಕ ಪ್ರಶಸ್ತಿಯು ರಸ್ತೆ ಜಾಗೃತಿ ಮೂಡಿಸುವುದು ಹಾಗೂ ರಸ್ತೆ ಅಪಘಾತಕ್ಕೊಳದಾಗ ವ್ಯಕ್ತಿಗಳ ರಕ್ಷಣೆ ನೀಡಲಾದ ಪ್ರಶಸ್ತಿಯಾಗಿದ್ದು, ಸಂಚಾರಿ ವಿಜಯ ಅವರು ರಸ್ತೆ ಅಪಘಾತಕ್ಕೊಳಗಾದಾಗ ತುರ್ತಾಗಿ ರಕ್ಷಣೆಗೆ ಆಸ್ಪತ್ರೆಗೆ ವ್ಯವಸ್ಥೆ ಮಾಡಿದ್ದು ಸುದೀಪ್ ಅವರು. ಇದನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು ಎಂದು ಸಂಜೀವಿನಿ ಜೀವರಕ್ಷಕ ಟ್ರಸ್ಟ್‌ನ ರಾಜ್ಯಾಧ್ಯಕ್ಷ ಡಿ.ರಂಗಸ್ವಾಮಿ ಪ್ರಶಸ್ತಿಯ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!