ಮತ್ಸ ಪ್ರಿಯರಿಗೆ ಮೀನಿನ ಸುಗ್ಗಿ: ಕಡಲ ತೀರಕ್ಕೆ ಬಂತು ರಾಶಿ ರಾಶಿ ಬೂತಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೋಮವಾರ ಮಲ್ಪೆಯ ತೊಟ್ಟಂ ಕಡಲ ತೀರದಲ್ಲಿ ರಾಶಿ ರಾಶಿ ಬೂತಾಯಿ ಮೀನುಗಳು ದಡಕ್ಕೆ ಬಂದು ಬಿದ್ದಿದ್ದು, ಮತ್ಸ ಪ್ರಿಯರು ಮೀನಿನ ಸುಗ್ಗಿ ಕಂಡು ಫುಲ್ ಖುಷ್ ಆದರು.

ಸದ್ಯ ಕಡಲಿನಲ್ಲಿ ಬೂತಾಯಿ ಮೀನುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸಮುದ್ರದಲ್ಲಿ ಗುಂಪಾಗಿ ಕಾಣಿಸಿಕೊಳ್ಳುವ ಬೂತಾಯಿ ಮೀನುಗಳು ಪಥ ಬದಲಿಸಿದಾಗ ಅಲೆಗಳ ಹೊಡೆತಕ್ಕೆ ಸಿಲುಕಿ ದಡಕ್ಕೆ ಬಂದು ಬೀಳುತ್ತದೆ ಎಂದು ಮೀನುಗಾರರು ತಿಳಿಸಿದ್ದಾರೆ.

ತೊಟ್ಟಂ ಭಾಗದ ದಡದಲ್ಲಿ ರಾಶಿ ಬಿದ್ದ ಬೂತಾಯಿ ಮೀನನ್ನು ಸಂಗ್ರಹಿಸಲು ಜನರು ಮುಗಿ ಬಿದ್ದಿದ್ದು, ಈ ವಿಡಿಯೋವು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!