Wednesday, September 27, 2023

Latest Posts

ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕ್ ನಿಂದ ಭಾರತಕ್ಕೆ ಮರಳಿದ ಮೀನುಗಾರರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ-ಪಾಕ್ ನ ಅಟ್ಟಾರಿ-ವಾಘಾ ಗಡಿಯಲ್ಲಿರುವ ಜಂಟಿ ಚೆಕ್ ಪೋಸ್ಟ್ ನಲ್ಲಿ ಪಾಕಿಸ್ತಾನವು 200 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ. ಅವರನ್ನು ಭಾರತೀಯ ಗಡಿ ಭದ್ರತಾ ಪಡೆಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ನೀಡಿದ ತುರ್ತು ಪ್ರಯಾಣ ಪ್ರಮಾಣಪತ್ರವನ್ನು ಬಳಸಿಕೊಂಡು ಎಲ್ಲಾ ಮೀನುಗಾರರು ಅಟ್ಟಾರಿ-ವಾಘಾ ಗಡಿಯ ಭೂ ಸಾರಿಗೆ ಮಾರ್ಗದ ಮೂಲಕ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಭಾರತಕ್ಕೆ ದಾಟಿದ್ದಾರೆ.

ಮೀನುಗಾರರು ವಾಪಸ್ ಮರಳಿದ ನಂತರ ಭಾರತೀಯ ವೈದ್ಯರ ತಂಡವು ವೈದ್ಯಕೀಯ ಪರೀಕ್ಷೆ ನಡೆಸಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಮೀನುಗಾರರು ಭಾರತಕ್ಕೆ ಕಾಲಿಟ್ಟ ಕ್ಷಣ ನಮಸ್ಕರಿಸಿ ಭೂಮಿಗೆ ಮುತ್ತಿಟ್ಟರು ತಾಯಿ ನಾಡಿಗೆ ಮರಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!