November 19, 2026
Thursday, November 19, 2026
spot_img

ಫಿಟ್ & ಫುಡ್ 18 | ಸಿಂಪಲ್ & ಹೆಲ್ದಿಯಾಗಿ ಏನಾದರೂ ತಿನ್ನಬೇಕು ಅಂದ್ರೆ ಈ ಎಗ್ ಸ್ಯಾಂಡೋ ರೆಸಿಪಿ ಟ್ರೈ ಮಾಡಿ

ಏನೇನ್ ಬೇಕು?

ಬೇಯಿಸಿದ ಮೊಟ್ಟೆ

ಬ್ರೆಡ್ ಸ್ಲೈಸ್

ಈರುಳ್ಳಿ

ಟೊಮೆಟೊ

ಹಸಿಮೆಣಸಿನಕಾಯಿ

ಪೆಪ್ಪರ್ ಪೌಡರ್

ಉಪ್ಪು

ಬೆಣ್ಣೆ

ಮೊಸರು

ಮಾಡೋದು ಹೇಗೆ ನೋಡಿಕೊಳ್ಳಿ

ಬೇಯಿಸಿದ ಮೊಟ್ಟೆಯ ಸಿಪ್ಪೆ ತೆಗೆದು, ಒಂದು ಬಟ್ಟಲಿನಲ್ಲಿ ಚಮಚದಿಂದ ಚೆನ್ನಾಗಿ ಪುಡಿ ಮಾಡಿ. ಪುಡಿ ಮಾಡಿದ ಮೊಟ್ಟೆಗೆ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಪೆಪ್ಪರ್ ಪೌಡರ್ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಸ್ವಲ್ಪ ಮೊಸರು ಸೇರಿಸಿ ಕ್ರೀಮಿ ರುಚಿ ತನ್ನಿ. ಬ್ರೆಡ್ ಸ್ಲೈಸ್‌ಗಳ ಮೇಲೆ ತಯಾರಿಸಿದ ಮೊಟ್ಟೆ ಮಿಶ್ರಣವನ್ನು ಸಮವಾಗಿ ಹರಡಿ, ಮತ್ತೊಂದು ಬ್ರೆಡ್ ಸ್ಲೈಸ್‌ನಿಂದ ಮುಚ್ಚಿ. ತವಾ ಅಥವಾ ಸ್ಯಾಂಡ್‌ವಿಚ್ ಮೇಕರ್ ಬಿಸಿ ಮಾಡಿ ಸ್ವಲ್ಪ ಬೆಣ್ಣೆ ಸವರಿ. ಬ್ರೆಡ್ ಎರಡೂ ಕಡೆ ಹೊಂಬಣ್ಣ ಬರುವವರೆಗೆ ಗರಿಗರಿಯಾಗಿ ಸುಡಿ. ಮಧ್ಯಕ್ಕೆ ಕತ್ತರಿಸಿ ಗ್ರೀನ್ ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆ ಬಿಸಿಬಿಸಿಯಾಗಿ ಸವಿಯಿರಿ.

ಇದನ್ನ ತಿಂದ್ರೆ ಏನ್ ಲಾಭ?

ಮೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇರುವುದರಿಂದ ಸ್ನಾಯುಗಳ ಬಲವರ್ಧನೆಗೆ ಸಹಕಾರಿ.

ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬು ಇರುವುದರಿಂದ ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ.

ಮೊಟ್ಟೆಯಲ್ಲಿರುವ ಪೋಷಕಾಂಶಗಳು ನೆನಪಿನ ಶಕ್ತಿ ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.

ಬೆಳಗಿನ ಉಪಹಾರಕ್ಕೆ ಅಥವಾ ಸಂಜೆಯ ಲಘು ಆಹಾರಕ್ಕೆ ಹೆಚ್ಚು ಪೌಷ್ಟಿಕಾಂಶ ನೀಡುವ ಆಯ್ಕೆಯಾಗಿದೆ.

Must Read

Skip to toolbar