ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಳ್ಳಬೇಕು ಎಂಬುದು ಹಲವರ ಕನಸಾಗಿತ್ತು. ಆ ಕನಸು ಇತ್ತೀಚೆಗೆ ಈಡೇರಿದ್ದು, ಶಿವಮೊಗ್ಗದ ಜನತೆಗೆ ಇದೀಗ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ.
ಶಿವಮೊಗ್ಗದಿಂದ ತಿರುಪತಿ, ಹೈದರಾಬಾದ್, ಗೋವಾಗೆ ಹೋಗಲು ಬಯಸುವವರಿಗಾಗಿ ಇಂದಿನಿಂದ ವಿಮಾನ ಸೇವೆ ಪ್ರಾರಂಭವಾಗಿದೆ.
ಹೈದರಾಬಾದ್ ನಿಂದ ಮೊದಲ ಸ್ಟಾರ್ ಏರ್ ವಿಮಾನ ಇಂದು ಶಿವಮೊಗ್ಗ ಏರ್ ಪೋರ್ಟ್ ಗೆ ಬಂದಿಳಿದಿದ್ದು, ಸಂಸದ ಬಿ.ವೈ.ರಾಘವೇಂದ್ರ ಬರಮಾಡಿಕೊಂಡರು. ಇದೇ ವೇಳೆ ಗೋವಾ, ಹೈದರಾಬಾದ್, ತಿರುಪತಿಗೆ ವಿಮಾನ ಹಾರಾಟಕ್ಕೆ ಚಾಲನೆ ನೀಡಲಾಯಿತು. ಈ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.