ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ಧಾರಾಕಾರ ಮಳೆ, ಇನ್ನೊಂದೆಡೆ ನೇತ್ರಾವತಿ ನೀರಿನಮಟ್ಟ ಏರಿಕೆ…ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನೇತ್ರಾವತಿ ನದಿ ತೀರದ ಎಲ್ಲಾ ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ಪಾಣೆ ಮಂಗಳೂರು, ಕಂಚಿಕಾರ್ ಪೇಟೆ, ಜಕ್ರಿಬೆಟ್ಟು, ಕೈಕುಂಜೆ ಬಸ್ತಿಪಡ್ಪು ಭಾಗಗಳಲ್ಲಿ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ.
ಇನ್ನುಬಪಾಣೆ ಮಂಗಳೂರು ಮತ್ತು ಕಂಚಿಕಾರ್ ಪೇಟೆಯ ರಸ್ತೆಗೆ ಕೂಡಾ ನೀರು ನುಗ್ಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ನದಿ ತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ನೆರೆ ಪರಿಸ್ಥಿತಿ ಎದುರಿಅಲು ತಾಲೂಕು ಆಡಳಿತ ಸಂಪೂರ್ಣ ಸಜ್ಜಾಗಿದ್ದು, ಸ್ಥಳೀಯ ಬೋಟ್ ಹಾಗೂ ಮುಳುಗು ತಜ್ಞರು ಅಗ್ನಿಶಾಮಕ ದಳ ಸನ್ನದ್ಧ ಸ್ಥಿಯಲ್ಲಿವೆ.