September 9, 2026
Wednesday, September 9, 2026
spot_img

ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ರುದ್ರಾವತಾರ ತಾಳಿದ ಪ್ರವಾಹ: ನೇಪಾಳದಲ್ಲಿ ಮೃತರ ಸಂಖ್ಯೆ 1,365ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭೀಕರ ಪ್ರವಾಹಕ್ಕೆ ಈಗಾಗಲೇ ನೇಪಾಳ ತತ್ತರಿಸಿಹೋಗಿದೆ. ನೆಲಕ್ಕೆ ಬಿದ್ದು ಮೆಲ್ಲಗೆ ಏಳುವ ಪ್ರಯತ್ನದಲ್ಲಿದ್ದ ನೇಪಾಳ ಜನತೆಗೆ ಜಲಪ್ರವಾಹ ಮತ್ತೊಂದು ಪೆಟ್ಟು ಕೊಟ್ಟು ಬೀಳಿಸಿದೆ. ನಾಲ್ಕು ಅಂತಸ್ತಿನ ಕಟ್ಟಡ ಮೇಲೆ ನೀರು ರುದ್ರನರ್ತವಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿ ಜನ ಬೆಚ್ಚಿಬಿದ್ದಿದ್ದಾರೆ. ಯುವಕರ ಗುಂಪೊಂದು ಶಾಲೆಯ ಫೀಲ್ಡ್‌ನಲ್ಲಿ ನೆಮ್ಮದಿಯಾಗಿ ಆಟ ಆಡುತ್ತಿರುತ್ತದೆ. ಈ ವೇಳೆ ದೂರದಲ್ಲಿ ಜಲಪಾತ ಬರುತ್ತಿರುವಂತಹ ಸದ್ದು ಬಂದಿದೆ. ಕ್ಷಣ ಕ್ಷಣಕ್ಕೂ ಸದ್ದು ಹತ್ತಿರವಾದಂತೆ ಅನ್ನಿಸಿ ಮಕ್ಕಳು ಶಾಲೆಯೊಳಕ್ಕೆ ಹೋಗಿದ್ದಾರೆ. ತದನಂತರ ಸಣ್ಣಗೆ ಕಾಣಿಸಿದ ನೀರು ಏಕಾಏಕಿ ಮುಗಿಲೆತ್ತರಕ್ಕೆ ಚಿಮ್ಮುತ್ತದೆ. ಅತ್ತ ಪ್ರವಾಹದ ನೀರು ನುಗ್ಗುತ್ತಲೇ ಇತ್ತ ಕ್ಯಾಮೆರಾದಲ್ಲಿ ಅದನ್ನು ಸೆರೆ ಹಿಡಿಯುತ್ತಿದ್ದ ವ್ಯಕ್ತಿ ನೀರು ತಮ್ಮ ಕಟ್ಟಡದತ್ತ ನುಗ್ಗುವುದನ್ನು ಗಮನಿಸಿದ್ದಾರೆ. ಈ ವೇಳೆ ಕೂಡಲೇ ಸಮೀಪದಲ್ಲಿದ್ದವರಿಗೆ ಕೂಗಿ ಮೇಲಂತಸ್ತಿಗೆ ಓಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇದಾದ ಕೆಲವೇ ಸೆಕೆಂಡ್ ಗಳಲ್ಲಿ ಭೀಕರ ಪ್ರವಾಹದ ನೀರು ಅವರಿದ್ದ ಕಟ್ಟಡಕ್ಕೂ ಹೊಡೆಯುತ್ತದೆ.

ಇನ್ನು ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಪರಿಣಾಮ ಸಾವಿನ ಸಂಖ್ಯೆ 1,365ಕ್ಕೆ ಏರಿಕೆಯಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇನ್ನಷ್ಟು ಮೃತದೇಹಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಇದೇ ವೇಳೆ ನಾಪತ್ತೆಯಾಗಿರುವ 5,326 ಮಂದಿಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !