BEAUTY TIPS| ಮುಖದ ಮೇಲಿನ ಕಪ್ಪು ಕಲೆ ಹೋಗಲಾಡಿಸಲು ಇದನ್ನು ಟ್ರೈ ಮಾಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಂದವಾಗಿ ಕಾಣಬೇಕೆಂದು ಬಯಸುವವರಿಗೆ ಮುಖದ ಮೇಲಿನ ಕಪ್ಪು ಕಲೆಗಳು ಸಮಸ್ಯೆಯಾಗಿ ಪರಿಣಮಿಸುತ್ತವೆ. ಅಂಥವರು ಯಾರೊಂದಿಗಾದರೂ ಬೆರೆಯಲು, ಆಚೆ ಹೋಗಲು ಹಿಂದೇಟು ಹಾಕುತ್ತಾರೆ. ತ್ವಚೆಯ ಮೇಲಿನ ಡೆಡ್ ಸೆಲ್ ಗಳು ಕೂಡ ತ್ವಚೆಯನ್ನು ಮಂಕಾಗಿಸುತ್ತದೆ. ಮುಖದ ಮೇಲಿನ ಕಪ್ಪು ಕಲೆಗಳು, ಮೊಡವೆಗಳು ಮತ್ತು ಕೊಳೆಯನ್ನು ತೆಗೆದುಹಾಕಲು ಕೆಲವೊದು ಟಿಪ್ಸ್‌ ಫಾಲೋ ಮಾಡಿ.

ಹಣ ಖರ್ಚು ಮಾಡಿ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಫೇಸ್ ಕ್ರೀಮ್ ಗಳನ್ನು ಟ್ರೈ ಮಾಡಬೇಕೆಂದಿಲ್ಲ, ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳಿಂದ ಮೊಡವೆ ಮತ್ತು ಕಪ್ಪು ಕಲೆಗಳಂತಹ ಸಮಸ್ಯೆಗಳನ್ನು ನಾವು ಸುಲಭವಾಗಿ ಹೋಗಲಾಡಿಸಬಹುದು.

ಒಂದು ಬಟ್ಟಲಿನಲ್ಲಿ ಒಂದು ಚಮಚ ಕಾಫಿ ಪುಡಿ ಹಾಕಿ. ಇದಕ್ಕೆ 4 ಚಮಚ ಹಸಿ ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂದು ಚಮಚ ಕಾರ್ನ್ ಫ್ಲೋರ್ ಪೌಡರ್ ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಒಲೆಯ ಮೇಲೆ ಇರಿಸಿ ಮತ್ತು ಪೇಸ್ಟ್ ಮಾಡಲು ಎರಡು ಮೂರು ನಿಮಿಷಗಳ ಕಾಲ ಮಿಶ್ರಣ ಮಾಡಿ. ನಂತರ ಕೆಳಗಿಳಿಸಿ ತಣ್ಣಗಾಗಲು ಬಿಡಿ. ಇದನ್ನು ಒಂದು ಕಂಟೇನರ್ ನಲ್ಲಿಟ್ಟು ಫ್ರಿಜ್ ನಲ್ಲಿಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಹತ್ತು ನಿಮಿಷ ಹಾಗೆಯೇ ಬಿಡಿ. ನಂತರ ಅದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ದಿನ ಬಿಟ್ಟು ದಿನ ಹೀಗೆ ಮಾಡಿದರೆ ಮುಖದಲ್ಲಿರುವ ಸತ್ತ ಜೀವಕೋಶಗಳು, ಎಣ್ಣೆ, ಕೊಳೆ, ಕಪ್ಪು ಕಲೆಗಳು, ಮೊಡವೆಗಳು ನಿವಾರಣೆಯಾಗಿ ಮುಖ ಸುಂದರ ಮತ್ತು ಕಾಂತಿಯುತವಾಗುತ್ತದೆ.

ಮುಖ್ಯವಾಗಿ ಕಾಫಿಯಲ್ಲಿರುವ ಕೆಫೀನ್ ಚರ್ಮದ ಡೆಡ್‌ ಸೆಲ್‌ ತೆಗೆಯಲು ಸಹಾಯ ಮಾಡುತ್ತದೆ. ಚರ್ಮವು ಮೃದು ಮತ್ತು ಹೊಳೆಯುತ್ತದೆ. ಕಾಫಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಚರ್ಮವು ಆರೋಗ್ಯಕರವಾಗಿರುತ್ತದೆ. ಅಲ್ಲದೆ, ಕಾರ್ನ್ ಫ್ಲೋರ್ ಮುಖದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮುಖವನ್ನು ಹೊಳೆಯುವಂತೆ ಮಾಡುತ್ತದೆ. ಹಾಲಿನಲ್ಲಿರುವ ಪೋಷಕಾಂಶಗಳು ಚರ್ಮಕ್ಕೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ.

ಬೇರೆ ಬೇರೆ ಇತರೆ ಚರ್ಮದ ಸಮಸ್ಯೆಗಳಿರುವವರು ಈ ಸಲಹೆ ಪಾಲಿಸದಿರಿ, ವೈದ್ಯರ ಸಲಹೆ ಪಡೆಯೋದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!