Tuesday, October 3, 2023

Latest Posts

CINE | ಕೃತಿ ಕರಬಂಧ ಹೊಟೇಲ್ ರೂಂನಲ್ಲಿ ಹಿಡನ್ ಕ್ಯಾಮೆರಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ನಟಿ ಕೃತಿ ಕರಬಂಧ ಹೊಟೇಲ್ ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಪತ್ತೆಯಾಗಿದೆ.

ಹೌದು, ಈ ಬಗ್ಗೆ ಕೃತಿ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಕನ್ನಡ ಸಿನಿಮಾ ಶೂಟಿಂಗ್‌ಗೆ ಬಂದಾಗ ಹೊಟೇಲ್ ರೂಂನಲ್ಲಿ ಹಿಡನ್ ಕ್ಯಾಮೆರಾ ಇತ್ತು ಎನ್ನುವ ವಿಷಯ ಹೇಳಿದ್ದಾರೆ.

ಸ್ವಲ್ಪ ಯಾಮಾರಿದ್ರೂ ನನ್ನ ವಿಡಿಯೋ ಲೀಕ್ ಆಗುತ್ತಿತ್ತು. ಹೊಟೇಲ್ ರೂಂನಲ್ಲಿ ಹೊಟೇಲ್ ಬಾಯ್ ಕ್ಯಾಮೆರಾ ಇಟ್ಟಿದ್ದ. ನಾನು ಹಾಗೂ ನನ್ನ ಸ್ಟಾಫ್ ಯಾವುದೇ ಹೊಟೇಲ್‌ಗೆ ಹೋದರೂ ರೂಂ ಚೆಕ್ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದೀವಿ. ಕ್ಯಾಮೆರಾ ಇಟ್ಟವನಿಗೆ ಇದು ಹೊಸ ವಿಷಯ ಅನಿಸುತ್ತದೆ ಹಾಗಾಗಿ ಆತ ಇಟ್ಟ ಕ್ಯಾಮೆರಾ ನಮಗೆ ಈಸಿಯಾಗಿ ಸಿಕ್ಕಿತ್ತು, ಆದರೆ ಈ ಅನುಭವ ಮಾತ್ರ ಸಖತ್ ಕಹಿಯಾಗಿತ್ತು ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!