Friday, September 29, 2023

Latest Posts

ಮನೆಯಲ್ಲೇ ಕುಳಿತು ಚಂದ್ರಯಾನ 3ರ ಲ್ಯಾಂಡಿಂಗ್ ವೀಕ್ಷಿಸೋದು ಹೇಗೆ ? ಇಲ್ಲಿದೆ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇಂದು ಇಡೀ ವಿಶ್ವವೇ ಭಾರತದತ್ತ ಎದುರುನೋಡುತ್ತಿದೆ. ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ ೩ ಮಿಷನ್‌ ಅಂತಿಮ ಹಂತ ತಲುಪಿದ್ದು, ಇಂದು ಚಂದ್ರನ ಕಕ್ಷೆಗೆ ಇಳಿಯಲಿದೆ. ಈ ಕ್ಷಣಗಳನ್ನು ನೀವು ಮನೆಯಲ್ಲೇ ಕುಳಿತು ವೀಕ್ಷಿಸಬಹುದು,ಅದು ಹೇಗೆ ಎಂದು ಇಲ್ಲಿದೆ ತಿಳಿಯಿರಿ.

ಚಂದ್ರಯಾನದ ಲ್ಯಾಂಡರ್‌ಗಳ ಲ್ಯಾಂಡಿಂಗ್‌ ಕಾರ್ಯಾಚರಣೆಯ ನೇರಪ್ರಸಾರವು ಬುಧವಾರ ಸಂಜೆ 5.20ಕ್ಕೆ ಪ್ರಾರಂಭವಾಗಲಿದೆ. ಇಸ್ರೊ ಅಧಿಕೃತ ವೆಬ್‌ಸೈಟ್‌, ಯೂಟ್ಯೂಬ್‌ ಚಾನೆಲ್‌ ಫೇಸ್‌ಬುಕ್‌ ಪುಟದಲ್ಲಿ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ, ಡಿಡಿ ನ್ಯಾಷನಲ್‌ ವಾಹಿನಿಯಲ್ಲೂ ಸಂಜೆ 5.27ರಿಂದ ಲ್ಯಾಂಡಿಂಗ್‌ನ ನೇರಪ್ರಸಾರ ಲಭ್ಯವಿರುತ್ತದೆ.

ಭಾರತದ ಇತಿಹಾಸದಲ್ಲಿ ಅವಿಸ್ಮರಣೀಯ ಕ್ಷಣ ಇದಾಗಲಿದೆ. ಎಲ್ಲರೂ ಉಸಿರು ಬಿಗಿ ಹಿಡಿದುಕೊಂಡು ವಿಕ್ರಮನು ಚಂದ್ರನ ಅಂಗಳದಲ್ಲಿ ಲ್ಯಾಂಡ್‌ ಆಗುವುದನ್ನೇ ಕಾತರದಿಂದ ಕಾಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!