October 17, 2026
Saturday, October 17, 2026
spot_img

FOOD | ಅನ್ನ, ರೊಟ್ಟಿಗೆ ಬೆಸ್ಟ್‌ ಕಾಂಬಿನೇಷನ್: ಘಮಘಮಿಸುವ ಮಾವಿನಕಾಯಿ ಚಟ್ನಿ ಒಮ್ಮೆ ಟ್ರೈ ಮಾಡಿ

ಮಾವಿನಕಾಯಿ ಚಟ್ನಿ ಊಟದ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುವ ಅತ್ಯಂತ ಜನಪ್ರಿಯ ಮತ್ತು ಬಾಯಲ್ಲಿ ನೀರೂರಿಸುವ ಕರಾವಳಿ ಹಾಗೂ ದಕ್ಷಿಣ ಭಾರತದ ಒಂದು ಸಾಂಪ್ರದಾಯಿಕ ಅಡುಗೆಯಾಗಿದೆ. ಬಿಸಿ ಬಿಸಿ ಅನ್ನ, ದೋಸೆ, ರೊಟ್ಟಿ ಅಥವಾ ಚಪಾತಿಯೊಂದಿಗೆ ತಿನ್ನಲು ಇದು ಅತ್ಯುತ್ತಮ ಕಾಂಬಿನೇಷನ್.

ಬೇಕಾಗುವ ಸಾಮಾಗ್ರಿಗಳು:
ಹಸಿ ಮಾವಿನಕಾಯಿ
ತೆಂಗಿನಕಾಯಿ
ಒಣ ಮೆಣಸಿನಕಾಯಿ
ಬೆಳ್ಳುಳ್ಳಿ
ಜೀರಿಗೆ
ಬೆಲ್ಲ
ಉಪ್ಪು
ಎಣ್ಣೆ
ಸಾಸಿವೆ
ಉದ್ದಿನಬೇಳೆ
ಕರಿಬೇವಿನ ಸೊಪ್ಪು
ಇಂಗು

ಮಾಡುವ ವಿಧಾನ
ಮೊದಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಒಣ ಕೆಂಪು ಮೆಣಸಿನಕಾಯಿ ಮತ್ತು ಜೀರಿಗೆಯನ್ನು ಹಸಿ ವಾಸನೆ ಹೋಗುವವರೆಗೆ ಸಣ್ಣ ಉರಿಯಲ್ಲಿ ಹುರಿದು ತಣ್ಣಗಾಗಲು ಬಿಡಬೇಕು. ನಂತರ ಮಿಕ್ಸಿ ಜಾರಿಗೆ ಹುರಿದ ಮೆಣಸಿನಕಾಯಿ, ಜೀರಿಗೆ, ಬೆಳ್ಳುಳ್ಳಿ, ತಣ್ಣಗಾದ ತೆಂಗಿನಕಾಯಿ ತುರಿ, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಹಾಕದೆ ಮೊದಲು ತರಿತರಿಯಾಗಿ ಪುಡಿ ಮಾಡಿಕೊಳ್ಳಬೇಕು.ನಂತರ ಇದಕ್ಕೆ ಹೆಚ್ಚಿದ ಅಥವಾ ತುರಿದ ಮಾವಿನಕಾಯಿ ತುಂಡುಗಳನ್ನು ಸೇರಿಸಿ, ತರಿತರಿಯಾಗಿ ರುಬ್ಬಿಕೊಳ್ಳಿ. ಮಾವಿನಕಾಯಿಯಲ್ಲಿ ತೇವಾಂಶ ಇರುವುದರಿಂದ ನೀರು ಸೇರಿಸುವ ಅಗತ್ಯವಿರುವುದಿಲ್ಲ. ರುಬ್ಬಿದ ಚಟ್ನಿಯನ್ನು ಒಂದು ಬೌಲ್‌ಗೆ ವರ್ಗಾಯಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ, ಕರಿಬೇವು ಮತ್ತು ಇಂಗು ಹಾಕಿ ಒಗ್ಗರಣೆ ಸಿದ್ಧಪಡಿಸಿ ಚಟ್ನಿಗೆ ಸೇರಿಸಿದರೆ ಘಮಘಮಿಸುವ ಮಾವಿನಕಾಯಿ ಚಟ್ನಿ ಸಿದ್ಧವಾಗುತ್ತದೆ.

Must Read