August 13, 2026
Thursday, August 13, 2026
spot_img

FOOD | ಖಾರ ಖಾರವಾದ ಮಟನ್ ಭುರ್ಜಿ ತಿಂದಿದ್ದೀರಾ? ಒಮ್ಮೆ ಟ್ರೈ ಮಾಡಿ

ಮನೆಯಲ್ಲೇ ಸುಲಭವಾಗಿ ಮತ್ತು ಬೇಗನೆ ತಯಾರಿಸಬಹುದಾದ ಖಾರದ ಖಾದ್ಯಗಳಲ್ಲಿ ಮಟನ್ ಭುರ್ಜಿ ಒಂದು. ಚಪಾತಿ, ರೊಟ್ಟಿ, ದೋಸೆ ಅಥವಾ ಅನ್ನದ ಜೊತೆ ಸವಿಯಲು ಇದು ತುಂಬಾ ರುಚಿಯಾಗಿರುತ್ತದೆ.

ಬೇಕಾಗುವ ಪದಾರ್ಥಗಳು:

ಮಟನ್ ಕೀಮಾ – 250 ಗ್ರಾಂ
ಈರುಳ್ಳಿ – 2
ಟೊಮೆಟೊ – 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಹಸಿಮೆಣಸಿನಕಾಯಿ – 2
ಅರಿಶಿನ ಪುಡಿ – ಕಾಲು ಚಮಚ
ಖಾರದ ಪುಡಿ – 1 ಚಮಚ
ಗರಂ ಮಸಾಲ ಪುಡಿ – ಅರ್ಧ ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ಈರುಳ್ಳಿ ಬಂಗಾರದ ಬಣ್ಣಕ್ಕೆ ತಿರುಗಿದ ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಕಲಸಿ.

ನಂತರ ಟೊಮೆಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ. ಬಳಿಕ ಅರಿಶಿನ, ಖಾರದ ಪುಡಿ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ. ಈಗ ಮಟನ್ ಕೀಮಾ ಹಾಕಿ ಚೆನ್ನಾಗಿ ಕಲಸಿ, ಕಡಿಮೆ ಉರಿಯಲ್ಲಿ ಮುಚ್ಚಳ ಮುಚ್ಚಿ 10 ರಿಂದ 15 ನಿಮಿಷ ಬೇಯಿಸಿ.

ಕೊನೆಯಲ್ಲಿ ಗರಂ ಮಸಾಲ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿ ಚೆನ್ನಾಗಿ ಕಲಸಿದರೆ ಬಿಸಿ ಬಿಸಿ ಮಟನ್ ಭುರ್ಜಿ ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !