September 28, 2026
Monday, September 28, 2026
spot_img

FOOD | ಯಮ್ಮಿ ಯಮ್ಮಿ ಸಿಹಿ ಗೆಣಸಿನ ಪ್ಯಾನ್ ಕೇಕ್ ತಿಂದಿದ್ದೀರಾ? ಒಮ್ಮೆ ಟ್ರೈ ಮಾಡಿ

ಬೆಳಗಿನ ಉಪಹಾರಕ್ಕೆ ಆಗಿರಲಿ ಸಂಜೆಯ ತಿಂಡಿಗೆ ಆಗಿರಲಿ ಆರೋಗ್ಯಕರ ಮತ್ತು ರುಚಿಕರವಾದ ಆಯ್ಕೆ ಬೇಕೇ? ಹಾಗಿದ್ರೆ ಸಿಹಿ ಗೆಣಸಿನಿಂದ ತಯಾರಿಸುವ ಪ್ಯಾನ್ ಕೇಕ್ ಮಕ್ಕಳಿಂದ ದೊಡ್ಡವರವರೆಗೂ ಇಷ್ಟಪಡುವ ತಿನಿಸು. ಫೈಬರ್, ವಿಟಮಿನ್ ಮತ್ತು ಶಕ್ತಿಯೂ ಇರುವ ಈ ರೆಸಿಪಿ ತಯಾರಿಸಲು ಕೂಡ ತುಂಬಾ ಸುಲಭ.

ಬೇಕಾಗುವ ಸಾಮಗ್ರಿಗಳು:

ಬೇಯಿಸಿದ ಸಿಹಿ ಗೆಣಸು – 1 ಕಪ್ (ಮ್ಯಾಶ್ ಮಾಡಿದ್ದು)
ಗೋಧಿ ಹಿಟ್ಟು – ½ ಕಪ್
ಅಕ್ಕಿ ಹಿಟ್ಟು – 2 ಟೇಬಲ್ ಸ್ಪೂನ್
ಬೆಲ್ಲದ ಪುಡಿ ಅಥವಾ ಸಕ್ಕರೆ – 2 ಟೇಬಲ್ ಸ್ಪೂನ್
ಏಲಕ್ಕಿ ಪುಡಿ – ಚಿಟಿಕೆ
ಹಾಲು – ಅಗತ್ಯವಷ್ಟು
ತುಪ್ಪ ಅಥವಾ ಬೆಣ್ಣೆ – ಸ್ವಲ್ಪ

ತಯಾರಿಸುವ ವಿಧಾನ:

ಒಂದು ಬೌಲ್‌ನಲ್ಲಿ ಮ್ಯಾಶ್ ಮಾಡಿದ ಸಿಹಿ ಗೆಣಸು, ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಬೆಲ್ಲದ ಪುಡಿ ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ. ಅಗತ್ಯವಿರುವಷ್ಟು ಹಾಲು ಸೇರಿಸಿ ಮೃದುವಾದ ದೋಸೆ ಹಿಟ್ಟಿನ ಹದಕ್ಕೆ ತಂದುಕೊಳ್ಳಿ.

ಈಗ ಪ್ಯಾನ್ ಬಿಸಿ ಮಾಡಿ ಸ್ವಲ್ಪ ತುಪ್ಪ ಹಚ್ಚಿ, ಹಿಟ್ಟನ್ನು ಸುರಿಯಿರಿ. ದೋಸೆಯಂತೆ ಹರಡಬೇಡಿ. ಎರಡೂ ಬದಿಗಳೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿ.

ಜೇನುತುಪ್ಪ ಅಥವಾ ಹಣ್ಣುಗಳೊಂದಿಗೆ ಸರ್ವ್ ಮಾಡಿದರೆ ಇನ್ನೂ ರುಚಿ ಹೆಚ್ಚುತ್ತದೆ.

Must Read