FOOD | ನಮ್ಮೆಲ್ಲರ ನೆಚ್ಚಿನ ತಿನಿಸು ಪಿಜ್ಜಾ ಬಗ್ಗೆ ನಿಮಗೆಷ್ಟು ಗೊತ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಿಜ್ಜಾ, ಈ ತಿನಿಸು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ವಯಸ್ಸಿನ ಮಕ್ಕಳಿಂದ ಹಿರಿಯರ ವರೆಗೂ ಎಲ್ಲರೂ ಇಷ್ಟ ಪಡುವ ನೆಚ್ಚಿನ ಫುಡ್ ಆಗಿದೆ. ವೆರೈಟಿ ಟೊಪ್ಪಿನ್ಗ್ಸ್ ನಲ್ಲಿ ಲಭ್ಯವಿರುವ ಈ ಪಿಜ್ಜಾವನ್ನು ಅನೇಕರು ಬಹಳ ಇಷ್ಟ ಪಟ್ಟು ತಿಂತಾರೆ. ಆದರೆ ಈ ಪಿಜ್ಜಾ ಗೆ ಒಂದು ಇತಿಹಾಸ ಇದೆ. ಆ ವಿಷಯ ಏನೆಂದು ನಿಮಗೆ ತಿಳಿದಿದ್ಯಾ? ಇಲ್ಲಿದೆ ನೋಡಿ ಪಿಜ್ಜಾ ಕುರಿತು ಕೆಲವೊಂದು ಇಂಟ್ರೆಸ್ಟಿಂಗ್ ವಿಷಯ..

Different kinds of pizza for all types of foodies | Food | Manorama English

ಇತಿಹಾಸದ ಆಳಕ್ಕೆ ಹೋದರೆ ಸಾವಿರ ವರ್ಷಗಳ ಹಿಂದಿನ ಪಿಜ್ಜಾದ ಇತಿಹಾಸ ಕಂಡು ಬರುತ್ತದೆ. 997 ರಲ್ಲಿ ಮೊದಲ ಪಿಜ್ಜಾವನ್ನು ತಯಾರಿಸಲಾಯಿತು ಎಂಬುದಕ್ಕೆ ಪುರಾವೆಗಳಿವೆ. ಇಟಲಿಯ ಕ್ಯಾಂಪೇನಿಯಾ ಗಡಿಯಲ್ಲಿರುವ ಗೇಟಾ ಪ್ರದೇಶದಲ್ಲಿ ಪಿಜ್ಜಾವನ್ನು ತಯಾರಿಸಲಾಗಿದೆ ಎಂದು ಹೇಳಲಾಗುತ್ತದೆ. ನೆಪೋಲಿಟನ್‌ ಪಿಜ್ಜಾ ಪ್ರಪಂಚದ ಎಲ್ಲಾ ಪಿಜ್ಜಾಗಳ ಪೂರ್ವಜ. ಈ ಪ್ರದೇಶದ ರಾಫೆಲ್‌ ಎಸ್ಪೊಸಿಟೋ ಅವರನ್ನು ಆಧುನಿಕ ಪಿಜ್ಜಾದ ಪಿತಾಮಹ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಆಧುನಿಕ ಪಿಜ್ಜಾ ತಯಾರಿಕೆಯ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

Mike's Homemade Pizza Recipe

ನೆಪೋಲಿಟನ್‌ ಪಿಜ್ಜಾವನ್ನು ಈಗ ಸಾಂಪ್ರದಾಯಿಕ ಪಿಜ್ಜಾ ಎಂದು ಪರಿಗಣಿಸಲಾಗಿದೆ, ಆದರೆ ಅದರ ಉತ್ಪಾದನಾ ತಂತ್ರವನ್ನು 2017 ರಲ್ಲಿ UNESCO ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ. ಅಷ್ಟೇ ಅಲ್ಲ, ಇಟಲಿಯನ್ನರಿಗೆ ನಿತ್ಯಾಹಾರ ಈ ಪಿಜ್ಜಾ. ಇಂದು, ಇಟಾಲಿಯನ್ ಪಿಜ್ಜಾ ಗ್ರಾಮೀಣ ಪ್ರದೇಶಗಳಲ್ಲಿಯೂ ಲಭ್ಯವಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!